S.N. Channabasappa ವಾರ್ಡ್ ನಂಬರ್ 31ರ ಮೇಲಿನ ತುಂಗನಗರದ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಹಲವು ವರ್ಷಗಳ ಬೇಡಿಕೆಯಾದ ಹಕ್ಕುಪತ್ರದ ಸಮಸ್ಯೆ, ಕುಡಿಯುವ ನೀರಿನ ಕೊರತೆ, ರಸ್ತೆಗಳ ದುರಸ್ಥಿ, ಹಾಗೂ ಸ್ವಚ್ಛತೆ ಸಂಬಂಧಿತ ಅನೇಕ ಸಮಸ್ಯೆಗಳ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ, ತಕ್ಷಣವೇ ಕ್ರಮಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು.
ಹಕ್ಕುಪತ್ರದ ವಿಚಾರದಲ್ಲಿ ಕೂಡ ದಾಖಲೆ ಪರಿಶೀಲನೆ ಪ್ರಕ್ರಿಯೆ ವೇಗವಾಗಿಸಿ, ನವಂಬರ್ ತಿಂಗಳೊಳಗೆ ನ್ಯಾಯಯುತ ಹಕ್ಕು ಪತ್ರ ವಿತರಿಸುವ ಕುರಿತು ಚರ್ಚಿಸಿದರು.
S.N. Channabasappa ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಅಧಿಕಾರಿಗಳಾದ ಶ್ರೀ ವಿಜಯಕುಮಾರ್, ಶ್ರೀ ಮಾರುತಿ, ಜಲಮಂಡಳಿ ಅಧಿಕಾರಿಗಳು, ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಜಗನ್ನಾಥ್, ಸ್ಥಳೀಯ ಭಾಜಪಾ ಮುಖಂಡರು, ಕಾರ್ಯಕರ್ತರು ಮತ್ತು ನಾಗರಿಕ ಬಂಧುಗಳು ಉಪಸ್ಥಿತರಿದ್ದರು.
