Department of Tourism ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರ ಸಚಿವಾಲಯದ “ ಧರ್ತಿ ಆಬಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ” ಯೋಜನೆಯಡಿಯಲ್ಲಿ ಗ್ರಾಮಗಳನ್ನು ಅಭಿವೃದ್ದಿಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತಹ ಹೊಂ ಸ್ಟೇ ನಿರ್ಮಿಸಲು ಹಾಗೂ ಅದನ್ನು ನವೀಕರಿಸಲು ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಗೆ ಶಿವಮೊಗ್ಗ ಜಿಲ್ಲೆಯ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ವಿರುಪಿನಕೊಪ್ಪ ಹಾಗೂ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿಯ ಸದಾಶಿವಪುರ ಗ್ರಾಮಗಳನ್ನು ಗುರುತಿಸಲಾಗಿದ್ದು, ಗ್ರಾಮಗಳನ್ನು ಅಭಿವೃದ್ದಿಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೊಂಸ್ಟೇ ನಿರ್ಮಿಸಲು ರೂ.5 ಲಕ್ಷ ಹಾಗೂ ನವೀಕರಿಸಲು ರೂ.3 ಲಕ್ಷ ಸಹಾಯಧನ ನೀಡಲಾಗುತ್ತದೆ.
ಈ ಗ್ರಾಮಗಳನ್ನು ಆತಿಥ್ಯ ಕ್ಷೇತ್ರವನ್ನಾಗಿ ಮಾಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, “ಡೆವಲಪ್ಮೆಂಟ್ ಆಫ್ ಹೊಂ ಸ್ಟೇ ಇನ್ ಟ್ರೈಬಲ್ ಏರಿಯಾ” ಯೋಜನೆಯನ್ನು ಮುದ್ದಿನಕೊಪ್ಪ ಮತ್ತು ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬುಡಕಟ್ಟು ಜನಾಂಗದವರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು.
Department of Tourism ಅರ್ಜಿ ಸಲ್ಲಿಸಲು ಆ.11 ರಂದು ಕೊನೆಯ ದಿನಾಂಕವಾಗಿದ್ದು, ಅರ್ಹ ಆಸಕ್ತರು/ ಕುಟುಂಬದವರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳಾದ ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ವರ್ಗ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮನೆಯ ದಾಖಲೆ, ಮನೆಯ ಫೋಟೋ, ಡಿಕ್ಲರೇಷನ್ ಫಾರ್ಮ್, ಗ್ರಾಮ ಪಂಚಾಯಿತಿಯ ಎನ್‌ಓಸಿ ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-251444 ಹಾಗೂ 7026296510 ಗೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
Department of Tourism ಬುಡಕಟ್ಟು ಗ್ರಾಮಗಳಲ್ಲಿ “ಹೋಂಸ್ಟೇ” ನಿರ್ಮಿಸಲು ಸಹಾಯಧನಕ್ಕೆ ಅರ್ಜಿ ಅಹ್ವಾನ
Date:
