S.N. Channabasappa ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪನವರು ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಲೆಗಾಂವ್ ಸ್ಫೋಟದ ವೇಳೆ ಇಡೀ ದೇಶ ಬೆಚ್ಚಿ ಬಿದ್ದಿತ್ತು.17 ವರ್ಷದ ಬಳಿಕ ಈಗ ಆರೋಪಿಗಳು ನಿರಾಪರಾಧಿಯಾಗಿ ಹೊರ ಹೊಮ್ಮಿದ್ದಾರೆ.
ಇದು ಹಿಂದೂ ರಾಷ್ಟ್ರಕ್ಕೆ ಸಿಕ್ಕ ಜಯವಾಗಿದೆ.ಇದು ಹಿಂದೂ ರಾಷ್ಟ್ರ ಎಂದು ಈ ಹಿಂದೆ ಹಲವಾರು ನಾಯಕರು ಹೇಳಿದ್ದರು ಎಂದು ಹೇಳಿದರು. ಹಿಂದೂ ರಾಷ್ಟ್ರದ ಸಮಗ್ರತೆ ಹಾಳು ಮಾಡಲು ಆಗಿನ ಕಾಂಗ್ರೆಸ್ ನಾಯಕರು ಮುಂದಾಗಿದ್ದರು.ಅನೇಕ ತನಿಖೆಗಳು ಆಗ ನಡೆದಿದ್ದರೂ ಆರೋಪಿಸಲಾಗುತ್ತಿತ್ತು.
ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಕರ್ನಲ್ ಪ್ರಸಾದ್ ಅವರನ್ನು ತುಳಿಯುವ ಯತ್ನ ಮಾಡಲಾಗಿತ್ತು.
ಈ ಮೂಲಕ ಕಾಂಗ್ರೆಸ್ ನ ನೀತಿ ತಿಳಿಯುತ್ತದೆ ಎಂದು ತಿಳಿಸಿದರು.
ಹಿಂದೂ ನಾಯಕರನ್ನು ತುಳಿಯುವ ನಿಟ್ಟಿನಲ್ಲಿ ಯುಪಿಎ ಸರ್ಕಾರ ಮುಂದಾಗಿತ್ತು. ಒಬ್ಬ ಹಿಂದೂ ಭಯೋತ್ಪಾದಕ ಆಗಲು ಸಾಧ್ಯವಿಲ್ಲ.ಷಡ್ಯಂತ್ರದ ಹಿನ್ನೆಲೆಯಲ್ಲಿ ಮನಸ್ಸಿಗೆ ಬಂದಂತೆ ಕೇಸುಗಳನ್ನು ಹಾಕಲಾಗಿತ್ತು.ಆಗಿನ ಅಧಿಕಾರಿಗಳ ವಿರುದ್ಧ ಉದ್ದೇಶ ಪೂರ್ವಕವಾಗಿ ಯಾರು ಮಾಡಿದ್ದರೂ ಅವರ ವಿರುದ್ಧ ತನಿಖೆಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಆರೋಪ ಮಾಡಿದವರೆಲ್ಲಾ ಈಗ ಕ್ಷಮೆ ಯಾಚಿಸಬೇಕು.
ಈ ದೇಶಕ್ಕೆ, ಈ ರಾಜ್ಯದ ಜನರಿಗೆ ಈ ಬಗ್ಗೆ ಗೊತ್ತಾಗಬೇಕು.ಸಿಮಿ ಸಂಘಟನೆಯನ್ನು ಬಲಿಪಶು ಮಾಡಬಾರದು ಎಂಬ ನಿಟ್ಟಿನಲ್ಲಿ ಷಡ್ಯಂತ್ರದಿಂದ ಸಿಮಿ ಸಂಘಟನೆ ದಾಳಿ ಮಾಡಿದ ಪ್ರಕರಣ ಕಾಂಗ್ರೆಸ್ ಕೈ ಬಿಟ್ಟಿತ್ತು.
ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ತಂಡವನ್ನು ಸದೆಬಡಿಯಲು ಸಂಚು ರೂಪಿಸಲಾಗಿತ್ತು ಎಂದರು.
S.N. Channabasappa ಕಾಂಗ್ರೆಸ್ ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶದ ಪ್ರಜೆಗಳೇ ಅಲ್ಲ.
ದಿಗ್ವಿಜಯ್ ಸಿಂಗ್ ಆಗ ಆರ್.ಎಸ್.ಎಸ್. ಸಂಘಟನೆಯು ಭಯೋತ್ಪಾದನಾ ತರಬೇತಿ ಶಿಬಿರಗಳು ನಡೆಸುತ್ತಿವೆ ಎಂದು ಹೇಳಿರುತ್ತಾರೆ.
ದಿಗ್ವಿಜಯ್ ಸಿಂಗ್ ಒಬ್ಬ ಹುಚ್ಚ
ಕಾಂಗ್ರೆಸ್ ನಲ್ಲಿ ಈ ರೀತಿ ಹಲವಾರು ಜನ ಹುಚ್ಚರಿದ್ದಾರೆ.
ಕಾಂಗ್ರೆಸ್ ನ ದುಷ್ಟ ನೀತಿ ಈಗ ಬಯಲಾಗಿದೆ ಎಂದು ತಿಳಿಸಿದರು.
