H.C.Yogesh ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದಿಂದ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ರವರ ನೇತೃತ್ವದಲ್ಲಿ ನೀರು ಸರಬರಾಜು ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೀವನ್ ಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಮನವಿಯನ್ನು ಆ. 4ರ ಸೋಮವಾರ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ರವರಿಗೂ ನೀಡಲಾಗುವುದು ಎಂದು ಸಂಘ ತಿಳಿಸಿದೆ. ಮಾಜಿ ಪಾಲಿಕೆ ಸದಸ್ಯ ಪಾಲಾಕ್ಷಿ, ನಗರ ಕಾಂಗ್ರೆಸ್ ನಾರ್ತ್ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಎಸ್. ಚಿನ್ನಪ್ಪ, ವೆಂಕಟೇಶ್ ವಿ., ಮಾಲತೇಶ್, ರಂಗನಾಥ್ ಈ., ಪಿ. ವೆಂಕಟೇಶ್, ಅಂತೋಣಿ, ಜನ್ ಮ್ಯಾಥ್ಯೂ, ಶಿವಮೂರ್ತಿ, ಹಿದಾಯತ್, ಪ್ರಕಾಶ್ ಆರ್., ವೇಲು, ರಾಘವೇಂದ್ರ, ಕಿರಣ್ ಪಿ., ಇಕ್ಬಾಲ್, ಭಾಸ್ಕರ್ ಇನ್ನಿತರರಿದ್ದರು.
