Rotary Club Shivamogga ಶೈಕ್ಷಣಿಕವಾಗಿ ಮಾತ್ರವಲ್ಲದೆ ಪ್ರಾಮಾಣಿಕತೆ, ತಾಳ್ಮೆ ಮತ್ತು ಸಹಾನುಭೂತಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಶಾಲೆಯು ಸಹಕಾರಿಯಾಗಲಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯ ಎಂದು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ವಿನೋಬನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಜೀವನವು ರೂಪುಗೊಳ್ಳಲು ಪ್ರಾರಂಭಿಸುವ ಸ್ಥಳ ಎಂದರೆ ಶಾಲೆ. ಪ್ರತಿ ದಿನವೂ ವಿದ್ಯಾರ್ಥಿಗಳು ಹೊಸತನಗಳನ್ನು ಶಾಲೆಯಲ್ಲಿ ಕಲಿಯಬಹುದಾಗಿದೆ. ಶಾಲಾ ಜೀವನವು ಕೇವಲ ತರಗತಿ ಕೊಠಡಿಗಳು ಮತ್ತು ಪರೀಕ್ಷೆಗಳಿಗಿಂತ ಹೆಚ್ಚಿನದ್ದಾಗಿದೆ. ನಗು, ಸ್ನೇಹ, ಕಲಿಕೆ, ಶಿಸ್ತು ಮತ್ತು ಕೌಶಲ್ಯಗಳು ಬೆಳೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನಂತರ ನೂತನವಾಗಿ ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಶ್ರೇಯಸ್ ಮತ್ತು ಕಾರ್ಯದರ್ಶಿ ಜಯಶ್ರೀ ಅವರ ತಂಡಕ್ಕೆ ಶುಭ ಹಾರೈಸಿದರು.
ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಶಾಲೆಯು ಎರಡನೇ ಮನೆ ಇದ್ದಂತೆ, ಶಾಲೆಯು ಶೈಕ್ಷಣಿಕ ಧ್ಯೇಯದ ಜತೆಗೆ ಉತ್ತಮ ನಾಗರಿಕನನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿವೆ. ಶಾಲೆಗಳಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
Rotary Club Shivamogga ಶಾಲೆಯ ಪ್ರಭಾರ ಮುಖ್ಯಶಿಕ್ಷಕ ರಮೇಶ್ ಮಾತನಾಡಿ, ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ಶಾಲೆಗೆ ಅಗತ್ಯ ನೆರವು ದೊರಕಿದೆ ಎಂದರು. ಇಂಟರಾಕ್ಟ್ ಚೇರ್ಮನ್ ಗೀತ ಜಗದೀಶ್, ಕಾರ್ಯದರ್ಶಿ ಜಯಶೀಲ ಶೆಟ್ಟಿ, ಆನಂದ್ ಎಸ್ ಜಿ, ಧರ್ಮೇಂದ್ರ ಸಿಂಗ್, ಈಶ್ವರ್ ಬಿವಿ, ಅನ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಬಸವರಾಜ್ ಮತ್ತು ಕಾರ್ಯದರ್ಶಿ ಮಥುರಾ ಧನಂಜಯ್, ಶುಭ ಚಿದಾನಂದ್ ಹಾಗೂ ಶಿಕ್ಷಕಿ ಶೋಭಾ ಹಿರೇಮಠ ಮತ್ತು ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
