Shiralakoppa Lions Club ಶಿರಾಳಕೊಪ್ಪ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಶ್ರೀ ವಾಸವಿ ಸಮುದಾಯ ಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಜಿಲ್ಲೆ 317 Bಯ ಮಾಜಿ ಜಿಲ್ಲಾ ಸಂಪುಟ ಕಾರ್ಯದರ್ಶಿ, ಹೊನ್ನಾವರದ ಸದಾನಂದ ಖೈರನ್ನ ಅವರು ಮಾತಾಡುತ್ತಾ, ನಾವು ಮೊದಲು ಮನೆಯಲ್ಲಿ ಲಯನ್ ಆಗಬೇಕು. ಅಂದರೆ ಲಯನ್ಸ್ ನ ಮೌಲ್ಯ, ತತ್ವಾದರ್ಶಗಳನ್ನು ಪೋಷಕರು, ಬಂಧು ಬಳಗದವರೊಂದಿಗೆ ಬಳಸಿ ಸ್ಪಂದಿಸುವ ಮೂಲಕ ಪ್ರಾರಂಭವಾಗಬೇಕು ಎಂದರು.
ಮನೆಗೆ ಮಾರಿ ಊರಿಗೆ ಉಪಕಾರಿಯಾದರೇನು ಫಲ? ವಿದ್ಯೆಗಿಂತ ಮಾನವೀಯತೆ ಬಹಳ ಶ್ರೇಷ್ಠ ಎಂದು ಬಡ ತಂದೆ ಮತ್ತು ವಿದ್ಯಾವಂತ ಮಗನ ನೈಜ ಘಟನೆಯ ಕಥೆ ಹೇಳುವ ಮೂಲಕ ಮನೋಜ್ಞ ಸಂದೇಶ ನೀಡಿದರು.
ಶಿರಾಳಕೊಪ್ಪ ಲಯನ್ಸ್ ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪದವಿ ಪ್ರದಾನ ಮಾಡಿದರು.
ಅಧ್ಯಕ್ಷರಾಗಿ ಯೋಗಿರಾಜ್ , ಕಾರ್ಯದರ್ಶಿಯಾಗಿ ರೇಣುಕಯ್ಯ, ಖಜಾಂಚಿಯಾಗಿ ಮೋಹನ್ ಸೇರಿದಂತೆ ಪೂರ್ಣ ಪ್ರಮಾಣದ ತಂಡ ಅಧಿಕಾರ ಸ್ವೀಕರಿಸಿತು.
ಹೊಸ ಲಯನ್ ವರ್ಷದ ಸೇವಾ ಕಾರ್ಯಕ್ರಮಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. 250 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ, ಗ್ರೀನ್ ಬೋರ್ಡ್, ಹೊದಿಕೆ ವಿತರಣೆ ಮುಖ್ಯ ಅಥಿತಿ ಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ವಿತರಿಸಲಾಯಿತು. SSLC ಯಲ್ಲಿ 623/ 625 ಅಂಕ ಗಳಿಸಿದ ಮಿಥುನ್ M D ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ 589/600 ಅಂಕಗಳಿಸಿದ ಸಿರಿ ಎಂ ಅವರನ್ನು ಪೋಷಕರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ, ಶಿರಾಳಕೊಪ್ಪದ ಡಾ. ಗಿರಿರಾಜ್ ಇಸ್ಲೂರ್ ರವರ 28 ವರ್ಷಗಳ ಸುಧೀರ್ಘ ಗ್ರಾಮೀಣ ಸೇವೆಯನ್ನು ಗುರುತಿಸಿ ವೈದ್ಯ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಕಾರ್ಗಿಲ್ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು. Shiralakoppa Lions Club ಸಮಾರಂಭದಲ್ಲಿ ಮಾಜಿ ಜಿಲ್ಲಾ ಗೌರ್ನರ್ ಎಂ ಕೆ ಭಟ್, ಪ್ರಾಂತಿಯ ಅಧ್ಯಕ್ಷ ಮಹಾಬಲೇಶ K.B, ವಲಯ ಅಧ್ಯಕ್ಷ ಕುಮಾರಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಯೋಗಿರಾಜ್ ಮಾತನಾಡಿ, ತಮ್ಮ ಯೋಚನೆ ಹಾಗೂ ಯೋಜನೆಗಳಿಗೆ ಎಲ್ಲರ ಸಹಕಾರ ಕೋರಿದರು. ಕ್ಲಬ್ ನ ಹಿರಿಮೆಗನುಗುಣವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಸೊರಬ, ಸಾಗರ, ಶಿಕಾರಿಪುರ, ಉಳವಿ ಹಾಗೂ ಹೊನ್ನಾವರ ಕ್ಲಬ್ ಗಳ ಪದಾಧಿಕಾರಿಗಳು, ಸದಸ್ಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ಆಶಾ ಮಂಜುನಾಥ್ ಪ್ರಾರ್ಥಿಸಿದರು. ವೇದಮೂರ್ತಿ ಮುಖ್ಯ ಅತಿಥಿ ಪರಿಚಯ ಮಾಡಿದರು. ವಸುಮತಿ ಅಮಿತ್ ಸೇವಾ ವರದಿ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ 2024-25 ಸಾಲಿನ ಅಧ್ಯಕ್ಷೆ ಪ್ರತಿಭಾ ಇಸ್ಲೂರ್ ಸ್ವಾಗತಿಸಿ ತಮ್ಮ ಅಧಿಕಾರ ಅವಧಿಯ ಅನುಭವ ಹಂಚಿಕೊಂಡರು. ಶೃತಿ ಗಿರೀಶ್ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ರೇಣುಕಯ್ಯ ವಂದಿಸಿದರು
Shiralakoppa Lions Club ಶಿವಮೊಗ್ಗ ಜಿಲ್ಲೆಯ ಸಮಸ್ಯೆ & ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿದ್ಧರಾಮಯ್ಯ ಅವರನ್ನ ಭೇಟಿ ಮಾಡಿದ ಸಚಿವ ಮಧು ಬಂಗಾರಪ್ಪ
Date:
