Shri Acharya Tulsi National College of Commerce ಶ್ರೀ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ನೂತನವಾಗಿ ಪ್ರಥಮ ವರ್ಷ ಪದವಿ ತರಗತಿಗಳನ್ನು ಸೇರಿಕೊಂಡಿರುವ ಯುವಕ ಯುವತಿಯರಿಗೆ ಸ್ಕೌಟ್ ಗೈಡ್ ಚಳುವಳಿಯ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ವಿ. ಅವಲಕ್ಕಿ ಅವರು ಮಾತನಾಡುತ್ತಾ ಮೇಲಿನಂತೆ ತಿಳಿಸಿದರು. ಮುಂದುವರೆದ ಅವರು ವಿಶ್ವ ವ್ಯಾಪ್ತಿ ಆಗಿರುವಂತಹ, ದೇಶಭಕ್ತಿಯನ್ನು ಪ್ರಜ್ವಲಿಸುವ ಸೇವಾ ಮನೋಭಾವನೆಯನ್ನು ಉದ್ದೀಪನ ಗೊಳಿಸುವ ಈ ಚಳುವಳಿಯ ಮುಖಾಂತರ ವೈಯಕ್ತಿಕವಾಗಿ ತಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಬೆಳೆಬಹುದಾಗಿದ್ದು ಸದೃಢ ರಾಷ್ಟ್ರ ಕಟ್ಟುವ, ಸಮಾಜಕ್ಕೆ – ರಾಷ್ಟ್ರಕ್ಕೆ ಉತ್ತಮ, ಉಪಯೋಗವಾಗುವಂತಹ ಯುವ ಪಡೆಯನ್ನ, ಮಾಡುತ್ತ ಕಲಿಯುವಿಕೆ, ಚಿಕ್ಕ ಚಿಕ್ಕ ತಂಡಗಳಲ್ಲಿ ಕೆಲಸ ಮಾಡುವುದು, ಪ್ರಗತಿಪರ ಶಿಕ್ಷಣ ಮತ್ತು ಹೊರಾಂಗಣ ಶಿಕ್ಷಣ ಮೂಲಕ ತರಬೇತಿಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸುವುದೇ ಈ ಚಳುವಳಿಯ ಉದ್ದೇಶವಾಗಿದೆ. ದೇವರಿಗೆ ಕರ್ತವ್ಯ, ದೇಶಕ್ಕೆ ಕರ್ತವ್ಯ ಮತ್ತು ಸ್ವ-ಶಿಸ್ತು ತತ್ವದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಈ ಚಳುವಳಿಯಲ್ಲಿ ಯುವಕ ಯುವತಿಯರು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಕಗಳನ್ನು ಪಡೆಯುವುದರ ಜೊತೆಗೆ ರಾಜ್ಯದ ರಾಷ್ಟ್ರದ ವಿವಿಧ ಭಾಗಗಳಲ್ಲಿ ಏರ್ಪಡಿಸುವ ಹಲವಾರು ಶಿಬಿರಗಳಲ್ಲಿ ಭಾಗವಹಿಸುತ್ತಾ ತಮ್ಮ ಸಂವಹನ ಕಲೆ, ವರ್ತನೆ ಮತ್ತು ಶಿಸ್ತಿನಿಂದ ಬದುಕುವುದನ್ನು ಕಲಿಯಬಹುದಾಗಿದೆ. ಇಂತಹ ಉತ್ತಮ ಅವಕಾಶವನ್ನ ಒದಗಿಸುವ ಈ ಚಳುವಳಿಗೆ ತಾವೆಲ್ಲರೂ ಸೇರಿಕೊಂಡು ರಾಷ್ಟ್ರ ಕಟ್ಟುವ ಈ ಚಳುವಳಿಯ ಭಾಗವಾಗಬೇಕೆಂದು ಕೇಳಿಕೊಂಡರು. Shri Acharya Tulsi National College of Commerce ಇಂತಹ ಅವಕಾಶ ಕೊಡುತ್ತಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಿಗೂ ಮತ್ತು ಎಲ್ಲ ಉಪನ್ಯಾಸಕ ವರ್ಗದವರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿವಿಧ ಯುವ ಸಂಸ್ಥೆಗಳ ಚಟುವಟಿಕೆಗಳ ಸಂಯೋಜಕರು, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಕೇಂದ್ರ ಸ್ಥಾನಕ್ಕೆ ಆಯುಕ್ತರಾದ ಶ್ರೀ ಜಿ ವಿಜಯ್ ಕುಮಾರ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗಾಗಿ ಇರುವ ಇಂತಹ ಉತ್ತಮ ಅವಕಾಶವನ್ನ ಸದ್ಬಳಕೆ ಮಾಡಿಕೊಂಡು ಸ್ಕೌಟ್ ಚಳುವಳಿಯ ಸಕ್ರಿಯ ಸದಸ್ಯರಾಗುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ನಾಗರಾಜ್ ದೈಹಿಕ ಶಿಕ್ಷಣ ನಿರ್ದೇಶಕರು ಮಾತನಾಡುತ್ತಾ ವಿದ್ಯಾರ್ಥಿಗಳು ಕಾಲೇಜಿನ ವತಿಯಿಂದ ಕೊಡುತ್ತಿರುವಂತಹ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಅಧ್ಯಕ್ಷತೆಯನ್ನು ವಹಿಸಿದ್ದಂತಹ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಮತಾ ಮೇಡಂ ರವರು ಮಾತನಾಡುತ್ತಾ ಕಳೆದ ಐದು ವರ್ಷಗಳಿಂದ ಕಾಲೇಜಿನಲ್ಲಿ ಚಳುವಳಿಯ ಚಟುವಟಿಕೆಗಳು ನಡೆಯುತ್ತಿದ್ದು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವಾರು ಶಿಬಿರಗಳಲ್ಲಿ ಭಾಗವಹಿಸಿ ರಾಜ್ಯ ಪುರಸ್ಕಾರ ಪ್ರಶಸ್ತಿಗಳನ್ನು ಪಡೆದು ಕಾಲೇಜಿಗೆ ಉತ್ತಮ ಹೆಸರನ್ನು ತಂದುಕೊಟ್ಟಿದ್ದಾರೆ ಅವರಿಗೆ ಅಭಿನಂದಿಸುತ್ತ ನೂತನ ವಿದ್ಯಾರ್ಥಿಗಳಿಗೂ ಸಹ ಇಂತಹ ಅವಕಾಶಗಳಿದ್ದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ರೇಂಜರ್ ಲೀಡರ್ ಪ್ರೊಫೆಸರ್ ಶ್ರೀಮತಿ ಸತಿ ಭಾರತಿ ದಯಾನಂದ , ರೋವರ್ ಲೀಡರ್ ಪ್ರೊಫೆಸರ್ ನವೀನ್ ತೇಲ್ಕರ್, ಪ್ರೊಫೆಸರ್ ಸೌಪರ್ಣಿಕಾ ಉಮೇಶ್, ಪ್ರೊಫೆಸರ್ ಶೃತಿ ಕೆ, ಶ್ರೀ ಪುನೀತ್ ಹೆಚ್. ಜಿ. ಉಪಸ್ಥಿತರಿದ್ದರು. ರೇಂಜರ್ ಕುಮಾರಿ ರುಚಿತ ಸರ್ವರನ್ನು ಸ್ವಾಗತಿಸಿದರು. ಕುಮಾರಿ ಸಿಂಚನಗೌಡ ವಂದಿಸಿದರು. ರೇಂಜರ್ ಕುಮಾರಿ ಅನನ್ಯ ಎನ್. ಎಸ್. ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Shri Acharya Tulsi National College of Commerce ಯುವಜನತೆಯ ಸರ್ವಾಂಗೀಣ ಬೆಳವಣಿಗೆ ಆಗಲು ಸ್ಕೌಟ್& ಗೈಡ್ಸ್ ಸೇರಿರಿ- ರಾಜೇಶ್ ವಿ ಅವಲಕ್ಕಿ
Date:
