Sarvajnendra Saraswati Pratisthana ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಆಶ್ರಯದಲ್ಲಿ
ಶ್ರೀಭಗವದ್ಗೀತಾ ಅಭಿಯಾನ 2025 ರ ಚಟುವಟಿಕೆಯ ಅಂಗವಾಗಿ ಭದ್ರಾವತಿಯಲ್ಲಿ ಅಭಿಯಾನದ ಉದ್ಘಾಟನೆ ನೆರವೇರಿತು.
ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಜಿ ಭಟ್ ಅವರು ಮೊದಲಿಗೆ ಮಾತನಾಡಿದರು.
ಸ್ವರ್ಣವಲ್ಲಿ ಸಂಸ್ಥಾನದ ಪೂಜ್ಯಶ್ರೀ ಗಂಗಾಧರ ಸರಸ್ವತಿ ಮಹಾಸ್ವಾಮಿಗಳು ರಾಜ್ಯಾದ್ಯಂತ ಭಗವದ್ಗೀತೆ ಅಭಿಯಾನ ಆರಂಭಿಸಿದ್ದಾರೆ.
ನಿತ್ಯ ಬದುಕಿನ ಸಮಸ್ಯೆಗಳಿಗೆ ಗೀತೆಯಲ್ಲಿ ಉತ್ತರವಿದೆ.
ಇಂದಿನ ಯುವಪೀಳಿಗೆ ಮತ್ತು ಶಾಲಾಮಕ್ಕಳಲ್ಲಿ ಗೀತೆಯ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಎಲ್ಲಾ ಜಿಲ್ಲೆಗಳಲ್ಲೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಗೀತ ಕಂಠಪಾಠ ಸ್ಪರ್ಧೆ ಗಳನ್ನ ಏರ್ಪಡಿಸಲಾಗಿದೆ. ಇದಕ್ಕೆ ಜಾತಿಮತ ಮೀರಿ ಎಲ್ಲಾ ಸಮುದಾಯದವರಿಗೂ ಮುಕ್ತವಾದ ಅವಕಾಶವಿದೆ ಎಂದರು.
Sarvajnendra Saraswati Pratisthana ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಬಾಲಕೃಷ್ಣ ಹೆಗಡೆ ಅವರು ಶಾಲಾಕಾಲೇಜುಗಳಲ್ಲಿ
ಗೀತ ಜಾಗೃತಿ ಚಟುವಟಿಕೆ ಹೇಗೆ ಹಮ್ಮಿಕೊಳ್ಳಬೇಕೆಂದು ವಿವರಿಸಿದರು.
ಅಸಕ್ತಿಯ ವಿಷಯವೆಂದರೆ ಶಿವಮೊಗ್ಗದ ಆಕ್ಸ್ ಫರ್ಡ್ ಶಾಲೆಯಲ್ಲಿ ಅತ್ಯಂತ ಉತ್ಸಾಹದಿಂದ ವಿದ್ಯಾರ್ಥಿವೃಂದಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಿದ್ದಾರೆ.
ಈವರ್ಷದ ನವೆಂಬರ್ 30 ರಂದು ಶಿವಮೊಗ್ಗದಲ್ಲಿ ಸಮಾರೋಪವಾಗಲಿದೆ ಎಂದು ತಿಳಿಸಿದರು. ಅಭಿಯಾನದ ಕಾರ್ಯಕಾರಿ ಸಮಿತಿ ಯ
ಮಂಜುನಾಥಶರ್ಮ. ಶಂಕರಮಠದ ಶ್ರೀನಾಗರಾಜ್. ಆನಂದ್ ಕೂದುವಳ್ಳಿ.
ಕೃಷ್ಣಸ್ವಾಮಿ, ಪುಷ್ಪಾ ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು
