Kargal Victory ನಾಗರೀಕರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ, ಯೋಧ ಗಡಿರಕ್ಷಣೆ ಮಾಡಬೇಕು, ಜೀವನ ಸಾಗಿಸಲು ರೈತ ಬೆಳೆ ಬೆಳೆದಾಗ ಎಲ್ಲಾರು ನೆಮ್ಮದಿ ಬದುಕು ಸಾಗಿಸಲು ಸಾದ್ಯ ಎಂದು ಸುಮಿತ್ರಮ್ಮ ಹೇಳಿದರು.
ಅಭಿರುಚಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಗಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈನಿಕರನ್ನು ನೋಡುವುದೆ ಒಂದು ಸಂತೋಷ, ನಮ್ಮ ಅಂದಿನ ಪ್ರದಾನಿ ಲಾಲಬಹದ್ದೂರ್ ಶಾಸ್ತ್ರಿ ‘ಜೈಜವಾನ್- ಜೈಕಿಸಾನ್’ ಎಂಬ ಘೋಷ ವಾಕ್ಯ ಉಚ್ಚರಿಸಿದ್ದು ಎಲ್ಲರೂ ಇವರ ಸೇವೆಯನ್ನು ಗುರುತಿಸಿ ಗೌರವಿಸಬೇಕೆಂದು. ನಮ್ಮೆಲ್ಲರ ಜೀವನ ನಿಂತಿರುವುದು ಇವರಿಬ್ಬರ ಮೆಲೆ. ಯಾವುದೇ ಹವಗುಣವಿರಲಿ ಸ್ವಲ್ಪವೂ ವಿಚಲಿತರಾಗದೆ ಸೇವೆ ಸಲ್ಲಿಸುತ್ತಾರೆ. ಇವರ ಮತ್ತು ಇವರ ಕುಟುಂಬದವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇವರ ಬೆನ್ನಲುಬಿನಲ್ಲಿ ನಾವು ಸ್ವರ್ಗಸುಖ ಅನುಭವಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಭೇದಾರ್ ಮಂಜುನಾಥ್ ಮಾತನಾಡಿ, ಪ್ರಪಂಚಕ್ಕೆ ಮಾದರಿಯಾಗಿರುವವರು ನಮ್ಮ ಯೋದರು. ದೇಶದ ಗಡಿ ಕಾಯುವುದು ಎಷ್ಟು ಕಷ್ಟ ಎಂಬುವುದನ್ನು ವಿವರಿಸಲು ಸಾದ್ಯವೇ ಇಲ್ಲ. ನಮ್ಮ ಸೈನ್ಯದ ಕಾರ್ಯಾಚರಣೆಯನ್ನೆ ಅನುಮಾನದಿಂದ ನೋಡುವವರನ್ನು, ಒಂದು ತಿಂಗಳು ಗಡಿ ಕಾಯುವ ಕಾರ್ಯಕ್ಕೆ ಹಚ್ಚಬೇಕು. ನಮ್ಮ ಸೈನಿಕ ಶಿಕ್ಷಣ ಪ್ರಾರಂಭದಲ್ಲೆ ಕಲಿಸುವುದು ಎಂತಹ ಸಂದರ್ಭ ಬಂದರೂ ಮೊದಲ ಆದ್ಯತೆ ದೇಶಕ್ಕೆ ಜೀವ ಕೊಡುವಂತಿರಬೇಕು. ನಮ್ಮ ಮನೆಯ ಕಾರ್ಯದಲ್ಲಿ ತೊಡಕಾಗದಂತೆ ಕಾರ್ಯನಿರ್ವಹಿಸಬೇಕು. ರಜೆ ಮೇಲೆ ಬಂದಾಗ, ದೇಶಕ್ಕೆ ತೊಂದರೆಯಾದರೆ ತಕ್ಷಣ ಕಾರ್ಯಕ್ಕೆ ಹಾಜರಾಗಲೇಬೇಕು ಎಂದರು.
ಮತ್ತೋರ್ವ ಸುಭೇದಾರ್ ರಾಜೇಶ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಆದೇಶ ಬಂದ ಒಂದು ಗಂಟೆಯೊಳಗಾಗಿ ಸನ್ನಧರಾಗಲೇಬೇಕು. ಮೈನಸ್ ಐವತ್ತು ಡಿಗ್ರಿ ಚಳಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂತಹ ಸ್ಥಳಗಳಲ್ಲಿ ಒಬ್ಬ ಯೋಧ ಆರು ತಿಂಗಳು ಮಾತ್ರ ಕಾರ್ಯನಿರ್ವಹಿಸಲು ಸಾಧ್ಯ. ಒಬ್ಬ ತಪ್ಪು ಮಾಡಿದರೆ, ಎಲ್ಲರಿಗೂ ಶಿಕ್ಷೆ ಶತಸಿದ್ಧ. ಈಶಾನ್ಯ ರಾಜ್ಯಗಳಲ್ಲಿ ಚೀನದ ಕುಮ್ಮಕಿನಿಂದ ಕಾರ್ಯನಿರ್ವಹಿಸುವುದು ಬಹಳ ಕಷ್ಡ, ಆದರೆ ಬೇರೆ ಬೇರೆ ದೇಶಗಳ ಯೋಧ ರೊಂದಿಗೆ ಹಾಗೂ ಅವರ ಶಸ್ತ್ರಗಳ ಪರಿಚಯ ಮಾಡಿಕೊಳ್ಳವ ಅವಕಾಶ ಕೆಲವೊಮ್ಮೆ ಸಿಗುತ್ತದೆ. ಇಂದು ವಿದ್ಯಾವಂತ ಯುವಕರು ನೇರವಾಗಿ ಅಧಿಕಾರಿಗಳಾಗಿ ಆಯ್ಕೆಯಾಗುವ ಅವಕಾಶ ಇದೆ. ಆಸಕ್ತ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಿ, ಉತ್ಸಹ ತೋರುವ ಯುವಕರನ್ನು ಕಳಿಸಿಕೊಡಿ ಎಂದರು.
Kargal Victory ನಾಗರತ್ನಮ್ಮ ಪ್ರಾರ್ಥಿಸಿ, ಮುರುಳಿ ಸ್ವಾಗತಿಸಿ, ಸ್ಮಿತಮೂರ್ತಿ ನಿರೂಪಿಸಿದರು. ವಂದನಾ ಮತ್ತು ಕಿಶೋರ್ ಅತಿಥಿ ಪರಿಚಯಿಸಿದರು. ಕಾರ್ಯದರ್ಶಿ ಕುಮಾರಶಾಸ್ತ್ರಿ ವಂದಿಸಿದರು. ನವೀನ್, ನಾಗಲಾಭಿಂಕ ರವಿಕುಮಾರ್, ಶ್ರೀನಾಥ್ ವಾಗೇಶ್, ಶರತ್ ಹಾಗೂ ಸದಸ್ಯರು ಭಾಗವಹಿಸಿದ್ದರು.
