Shivamogga ಸಮೀಪದ ಮಲ್ನಾಡ್ ಶೈರ್‌ನಲ್ಲಿ ಐಆರ್‌ಐಎ ಶಿವಮೊಗ್ಗ ಉಪಶಾಖೆಯು ಐಆರ್‌ಐಎ ಶಕ್ತಿ ಬ್ಯಾನರ್‌ನಡಿ ಕಾರ್ಡಿಯಾಕ್ ಇಮೇಜಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಮಹಿಳಾ ರೇಡಿಯಾಲಜಿಸ್ಟ್ ಸ್ಪೀಕರ್ ಪ್ಯಾನೆಲ್ ಮೊದಲ ಬಾರಿ ಕರ್ನಾಟಕದಲ್ಲಿ ಆಯೋಜಿಸಿತ್ತು.
ಐಆರ್‌ಐಎ ಉಪವಿಭಾಗದ ಅಧ್ಯಕ್ಷೆ ಡಾ. ಉಮಾ ಪಾಂಡುರಂಗಿ ಮತ್ತು ಕಾರ್ಯದರ್ಶಿ ಡಾ. ಶ್ರೀಕಾಂತ್ ನೇತೃತ್ವದಲ್ಲಿ ಸಿಎಂಇ ನಡೆಯಿತು. ವಿಶೇಷ ವಿಕಿರಣಶಾಸ್ತ್ರಜ್ಞರು ಹಾಗೂ ಶಿವಮೊಗ್ಗದ ಹೃದ್ರೋಗ ಶಾಸ್ತ್ರಜ್ಞರ ದೊಡ್ಡ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಎಂಇ ಗೌರವ ಕೋಶಾಧಿಕಾರಿ ಡಾ. ಅಖಿಲಾ ಅವರು ಸ್ವಾಗತಿಸಿದರು. ಐಆರ್‌ಐಎ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಪ್ರವೀಣ್ ಮತ್ತು ಡಿಎಚ್‌ಒ ಡಾ. ನಟರಾಜ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಐಆರ್‌ಐಎ ಶಕ್ತಿ ನಾಯಕ ಡಾ. ಫ್ಲೋರಾ ನೆಲ್ಸನ್, ಡಾ. ವರ್ಷಾ ಕಾಳೆ ಮತ್ತು ಡಾ. ಜಾನ್ಹವಿ ಶುಭ ಹಾರೈಸಿದರು.
ಆಧುನಿಕ ಮತ್ತು ಹೆಚ್ಚು ಸುಧಾರಿತ ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳ ಮೇಲೆ ವಿಶೇಷ ಉಪನ್ಯಾಸಗಳು ನಡೆದವು. ಮಹಿಳಾ ಭಾಷಣಕಾರರಾದ ಡಾ. ಮೇರಿ ವಾರುಣ್ಯ, ಡಾ. ಪ್ರಿಯದರ್ಶಿನಿ ಮತ್ತು ಡಾ. ಉಮಾ ಪಾಂಡುರಂಗಿ ಅವರಿಂದ ಉತ್ತಮ ಗುಣಮಟ್ಟದ ಉಪನ್ಯಾಸ ನಡೆಯಿತು.
Shivamogga ಹೃದ್ರೋಗ ತಜ್ಞರಾದ ಡಾ. ಶಿವಶಂಕರ್, ಡಾ. ಮಹೇಶಮೂರ್ತಿ, ಡಾ. ಪರಮೇಶ್ವರ, ಡಾ. ವಿಜೇತ್, ಡಾ ಶ್ರೀನಿವಾಸ, ಡಾ. ಕಿರಣ್ ಭೀಮೇಶ್ವರ್, ಡಾ. ಮಂಜುನಾಥ್, ಡಾ. ಆದಿತ್ಯ ಉಡುಪ, ಡಾ. ಅಶ್ವಲ್ ಮತ್ತು ಡಾ. ಶರತ್ ಭಾಗವಹಿಸಿದ್ದರು. ಡಾ ಉಮಾ ಪಾಂಡುರಂಗಿ ವಂದನಾರ್ಪಣೆ ನಡೆಸಿಕೊಟ್ಟರು.
Shivamogga ಶಿವಮೊಗ್ಗದಲ್ಲಿ ಸುಧಾರಿತ “ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳು” ಕುರಿತ ಉಪನ್ಯಾಸ ಕಾರ್ಯಕ್ರಮ
Date:
