Ginger Leaf Spot Disease ಜಿಲ್ಲೆಯ ಎಲ್ಲಾ ಶುಂಠಿ ಬೆಳೆಯುವ ಪ್ರದೇಶಗಳಲ್ಲಿ ಪೈರಿಕುಲೇರಿಯಾ ಎಂಬ ಶಿಲೀಂಧ್ರದಿಂದ ಎಲೆಚುಕ್ಕೆ ರೋಗವು ಹೊಸದಾಗಿ ಉಲ್ಬಣಗೊಂಡಿದ್ದು, ಶುಂಠಿ ಬೆಳೆಗಾರರು ನಿರ್ವಹಣಾ ಕ್ರಮಗಳನ್ನು ತಕ್ಷಣದಿಂದಲೇ ತೆಗೆದುಕೊಳ್ಳಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೋಗವು ಗಾಳಿಯಿಂದ ಹಾಗೂ ಮಳೆ ಹನಿಗಳ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಮತ್ತು ಒಂದು ಹೊಲದಿಂದ ಮತ್ತೊಂದೆಡೆಗೆ ಬೇಗನೆ ಹರಡಲಿದೆ. ಅತೀ ಹೆಚ್ಚಿನ ಮಳೆ ಮತ್ತು ಅಧಿಕ ತೇವಾಂಶದ ಜೊತೆಗೆ ಕಡಿಮೆ ತಾಪಮಾನ ರೋಗ ಹರಡಲು ಪೂರಕ ವಾತಾವರಣವಾಗಿದೆ.
ಈ ರೋಗದಿಂದ ಶುಂಠಿ ಬೆಳೆಗಳಲ್ಲಿ ಮೊದಲಿಗೆ ಎಲೆಗಳ ಮೇಲೆ ಕಪ್ಪು ಅಥವಾ ಹಸಿರು ಬಣ್ಣದ ಚುಕ್ಕೆಗಳು ಕಂಡುಬರಲಿದ್ದು, ಸುತ್ತಲೂ ಕಂದು ಬಣ್ಣದಿಂದ ಕೂಡಿರುತ್ತದೆ. ಕ್ರಮೇಣವಾಗಿ ಸಸ್ಯದ ಎಲ್ಲಾ ಭಾಗಗಳಿಗೆ ಈ ಚುಕ್ಕೆಗಳು ಆವರಿಸಿ ಎಲೆಗಳು ಒಣಗಿ, ಸಸಿಗಳು ಸಾಯಲಾರಂಭಿಸುತ್ತವೆ.
ನಿರ್ವಹಣಾ ಕ್ರಮಗಳು:
Ginger Leaf Spot Disease ಜಿಲ್ಲೆಯಲ್ಲಿ ಶುಂಠಿ ಬೆಳೆಗಳಲ್ಲಿ ಪೈರಿಕುಲೇರಿಯಾ ಎಂಬ ಶಿಲೀಂಧ್ರದಿAದ ಎಲೆಚುಕ್ಕೆ ರೋಗವು ಹೆಚ್ಚಾಗಿ ಉಲ್ಭಣಿಸುತ್ತಿದ್ದು, ರೋಗವನ್ನು ಹತೋಟಿಗೆ ತರಲು ಶಿಲೀಂಧ್ರ‍್ರನಾಶಕಗಳಾದ ಹೆಕ್ಸಾಕೋನೋಜೋಲ್ 25 ಇಸಿ 1 ಮಿ.ಲೀ. ಅಥವಾ ಟೆಬುಕೋನೋಜೋಲ್ 25 ಇಸಿ 1 ಮಿ.ಲೀ. ಅಥವಾ ಟೆಬುಕೋನೋಜೋಲ್ + ಟ್ರೆöÊಪ್ಲಾಕ್ಸಿಸ್ಟೊçಬಿನ್ 0.5 ಮಿ.ಲೀ. ಅಥವಾ ಅಜಾಕ್ಸಿಸ್ಟೊçÃಬಿನ್ + ಡೈಪೆನ್‌ಕೋನೋಜೋಲ್ 0.5 ಮಿ.ಲೀ. ಒಂದು ಲೀಟರ್ ನೀರಿಗೆ ಬೆರೆಸಿ ಜೊತೆಗೆ ಒಂದು ಮಿ.ಲೀ. ಅಂಟು ಅಥವಾ ರಾಳವನ್ನು ಸೇರಿಸಿ ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸಬೇಕು. ಮತ್ತೆ ಹದಿನೈದು ದಿನಗಳ ಅಂತರದಲ್ಲಿ ಮೇಲೆ ತಿಳಿಸಿರುವ ಯಾವುದಾದರೊಂದು ಶಿಲೀಂಧ್ರ ನಾಶಕವನ್ನು 2 ರಿಂದ 3 ಬಾರಿ ಸಿಂಪಡಿಸಬೇಕು.
ಮೇಲೆ ತಿಳಿಸಿರುವ ವಾತಾವರಣವು ಕೆಂಪು ಕೊಳೆ ಹಾಗೂ ಹಸಿರು ಕೊಳೆ ರೋಗಗಳಿಗೂ ಸೂಕ್ತವಾಗಿದ್ದು, ಎಲೆ ಚುಕ್ಕೆ ರೋಗದ ಹತೋಟಿಗೆ ಉಪಯೋಗಿಸುವ ಶಿಲೀಂಧ್ರ ನಾಶಕದ ಜೊತೆಯಲ್ಲಿ ವಾಲಿಡಮೈಸಿನ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಪೈರಿಕುಲೇರಿಯಾ ಎಲೆಚುಕ್ಕೆ ರೋಗಕ್ಕೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿಗಾಗಿ ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ
ಡಾ. ಹೆಚ್.ಬಿ.ನರಸಿಂಹಮೂರ್ತಿ-8050173788, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇಮ್ರಾನ್ ಖಾನ್, ಹೆಚ್. ಎಸ್.- 9379228200 ಹಾಗೂ ಇರುವಕ್ಕಿ ರೈತರ ತರಬೇತಿ ಸಂಸ್ಥೆಯ ವಿಸ್ತರಣಾ ನಿರ್ದೇಶನಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣ ರೆಡ್ಡಿ, ಪಿ. – 9483162891 ಇವರುಗಳನ್ನು ಸಂಪರ್ಕಿಸಬಹುದು ಎಂದು ರೈತರ ತರಬೇತಿ ಸಂಸ್ಥೆಯ ವಿಸ್ತರಣಾ ನಿರ್ದೇಶಕ ಡಾ.ಜಿ.ಕೆ.ಗಿರಿಜೇಶ್ ತಿಳಿಸಿದ್ದಾರೆ.
Ginger Leaf Spot Disease ಶುಂಠಿಗೆ ಎಲೆಚುಕ್ಕೆ ರೋಗ.ನಿಯಂತ್ರಣಾ ಕ್ರಮಗಳ ಬಗ್ಗೆ ಇರುವಕ್ಕಿಕೃಷಿ ವಿವಿ ತಜ್ಞರಿಂದ ಸಲಹೆ
Date:
