Shimoga News ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆ ನಡುವೆ ಆಗಾಗ ಪ್ರವಾಸ ಕೈಗೊಳ್ಳುವುದರಿಂದ ಜೀವನದಲ್ಲಿ ಹೊಸ ಉತ್ಸಾಹ ಬರುವುದರ ಜೊತೆಗೆ ದೈಹಿಕ ಮಾನಸಿಕ ಸದೃಢತೆ. ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪ್ರವಾಸೋದ್ಯಮ ವೇದಿಕೆ ಸಂಚಾಲಕರಾದ ಅ.ನಾ ವಿಜಯೇಂದ್ರ ರಾವ್ ನುಡಿದರು ಅವರು ಸಿಗಂದೂರುಚೌಡೇಶ್ವರಿ ಸೇತುವೆಗೆ ಹಾಗೂ ಐತಿಹಾಸಿಕ ಸ್ಥಳಗಳಿಗೆ ಏರ್ಪಡಿಸಲಾದ ಪ್ರವಾಸ ಉದ್ಘಾಟಿಸಿ ಮಾತನಾಡಿದರು
ಶಿವಮೊಗ್ಗ ಸುತ್ತಮುತ್ತಲವ ಪ್ರದೇಶಗಳನ್ನು ಜನಸಾಮಾನ್ಯರಿಗೂ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಈ ರೀತಿ ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ನಗರದ ಜನತೆಯ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು. ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಅಂಡಮಾನ್ ಪ್ರವಾಸಗಳನ್ನು ಸಾಕಷ್ಟು ಬಾರಿ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ಇನ್ನು ಅನೇಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು
ಅಧ್ಯಕ್ಷತೆ ವಹಿಸಿದ್ದ ಡಿ ಎಂ ಶಂಕರಪ್ಪನವರು ಮಾತನಾಡುತ್ತಾ, ಕಳೆದ ಒಂದು ತಿಂಗಳಿನಿಂದ ಶ್ರೀಂಗೆರಿ, ಬಂಗಾರಮಕ್ಕಿ, ಬನವಾಸಿ ಇಂದು ಸಿಗಂದೂರು ಹೀಗೆ ವಾರದ ರಜಾ ದಿನಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ, ಯಶಸ್ಸಿಗೆ. ಹಾಗೆ ಈ ಪ್ರವಾಸಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಹ ಬರುತ್ತಿರುವುದು ವಿಶೇಷವಾಗಿದೆ ಎಂದು
ಸಹಕರಿಸುತ್ತಿರುವ ಎಲ್ಲರಿಗೂ
ಧನ್ಯವಾದಗಳನ್ನು ತಿಳಿಸಿದರು
Shimoga News ಬಸ್ ಮಾಲಿಕರ ಸಂಘದ ಅಧ್ಯಕ್ಷರಾದ ರಂಗಪ್ಪನವರು ಮಾತನಾಡುತ್ತಾ ನಗರದ ಹಲವರು ಸೇರಿ ಮಾಡಿಕೊಂಡಿರುವ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಇನ್ನೂ ಹಲವಾರು ಕಾರ್ಯಕ್ರಮ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ, ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರವಾಸಿ ತಾಣಗಳ ಪರಿಚಯವನ್ನು ಮಾಡಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಅದಕ್ಕೆ ನಮ್ಮ ಬಸ್ ಮಾಲಿಕರ ಸಹಕಾರ ಎಂದೆಂದು ಹೀಗೆ ಇರುತ್ತದೆ. ಪ್ರವಾಸಿಗರ ಸಂತೋಷವೆ ನಮ್ಮ ಸಂತೋಷ, ಸೇವೆಯೆ ನಮ್ಮ ಧ್ಯೇಯ ಎಂದರು.
ಸಿದ್ದಲಿಂಗಪ್ಪನವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಗೋಪಿನಾಥ್ ವಂದಿಸಿದರು ಜಿ.ವಿಜಯಕುಮಾರ್ ನಿರೂಪಿಸಿದರು.
Shimoga News ಪ್ರವಾಸದಿಂದ ಜೀವನೋತ್ಸಾಹ,ಜ್ಞಾನವೃದ್ಧಿ- ಅ.ನಾ.ವಿಜೇಂದ್ರರಾವ್
Date:
