Santosh Lad ಇತ್ತೀಚಿಗೆ ಅಪಘಾತಕೀಡಾಗಿದ್ದ ಕಾರಣ ವಿಶ್ರಾಂತಿ ಪಡೆದು ಆರೋಗ್ಯ ಚೇತರಿಸಿಕೊಳ್ಳುತ್ತಿರುವ ಕಾರ್ಮಿಕ ಮುಖಂಡ ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್ ಅವರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ಅವರ ನಿವಾಸದಲ್ಲಿ ಮೈಕೆಲ್ ಅವರನ್ನು ಭೇಟಿ ಮಾಡಿದ ಸಂತೋಷ್ ಲಾಡ್, ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಮಿಕರ ಏಳಿಗೆಗೆಗಾಗಿ ಶ್ರಮಿಸಿದ್ದ ಮೈಕೆಲ್ ಅವರ ಸೇವೆಯನ್ನು ಸ್ಮರಿಸಿ ಕಾರ್ಮಿಕರ ಆಗುಹೋಗುಗಳ ಬಗ್ಗೆ ಚರ್ಚಿಸಿ, ಮೈಕೆಲ್ ಅವರನ್ನು ಬೇಗ ಗುಣಮುಖರಾಗುವಂತೆ ಹಾರೈಸಿದ ಸಚಿವ ಲಾಡ್, ಕಾರ್ಮಿಕರ ಏಳಿಗೆಗಾಗಿ ಇಲಾಖೆ ತಂದಿರುವ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಇನ್ನು ಮೈಕಲ್ ಅವರು ಕಳೆದ 60 ವರ್ಷಗಳಿಂದ ಕಾರ್ಮಿಕ ಸಂಘಟನೆಯಲ್ಲಿ ಹಲವಾರು ಸಾರ್ವಜನಿಕ ಉದ್ದಿಮೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಮಿಕ ಇಲಾಖೆ ಸಚಿವರಾಗಿ ಕಾರ್ಮಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದಕ್ಕೆ ಹಿರಿಯರಾದ ಮೈಕೆಲ್ ಅವರು ಸಂತೋಷ್ ಲಾಡ್ ಅವರ ಸೇವಾಕಾರ್ಯವನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿ ಆಶೀರ್ವದಿಸಿದರು.
Santosh Lad ಭೇಟಿ ಸಂದರ್ಭದಲ್ಲಿ ಫೆರ್ನಾಂಡಿಸ್ ಅವರ ಪತ್ನಿ ಡೋನಾ ಫರ್ನಾಂಡಿಸ್, ಲಾಡ್ ಅವರ ಸಹೋದರ ಹುಬ್ಬಳ್ಳಿ-ಧಾರವಾಡ ಕಾರ್ಪೊರೇಟರ್ ಮಯೂರ್ ಮೋರೆ, ಸಂಘಟನಾಕಾರರಾದ ಲಕ್ಷ್ಮಯ್ಯ ಕಾಳಪ್ಪ, ಗುಂಜೂರು ಮಂಜು ಸೇರಿದಂತೆ ಇತರರು ಭೇಟಿ ಸಂದರ್ಭದಲ್ಲಿ ಜೊತೆಗಿದ್ದರು.
