Rotary Club Shimoga ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗುವಿನ ಆರೈಕೆಯು ಅತ್ಯಂತ ಮುಖ್ಯ ಆಗಿರುತ್ತದೆ ಎಂದು ಶರಾವತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಉಮಾ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ವತಿಯಿಂದ ಆಯೋಜಿಸಿದ್ದ ಮೆಟರ್ನಿಟಿ & ಚೈಲ್ಡ್ ಕೇರ್ ಹೆಲ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯು ಮೂರು ತಿಂಗಳು ಆದಾಗ ನೋಂದಾಯಿಸಿಕೊಳ್ಳಬೇಕು. ಉತ್ತಮ ಪೌಷ್ಠಿಕ ಆಹಾರ, ಮಾತ್ರೆ, ಹಣ್ಣುಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಬೇಕು. ಹೊಸದಾಗಿ ಸರ್ಕಾರ ಕಾರ್ಯಕ್ರಮ ಪ್ರಾರಂಭಿಸಿದ್ದು, ತಾಯಿ ಕಾರ್ಡ್ನಲ್ಲಿ ಅಂಕವನ್ನು ನೀಡುತ್ತಿದ್ದು, ಇದರಿಂದ ತಾಯಿ-ಮಗುವಿನ ಆರೋಗ್ಯ ಗುಣಮಟ್ಟದ ಅರಿವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾರ್ಯಕ್ರಮ ಅಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಮಹಿಳೆಯರು, ಮುಂದಿನ ಪ್ರಜೆಗಳಾದ ಮಕ್ಕಳ ಆರೋಗ್ಯಕ್ಕೆ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಅತ್ಯುತ್ತಮ ಕಾರ್ಯಕ್ರಮಗಳ ಸದುಪಯೋಗವನ್ನು ಹಲವಾರು ಪಡೆಯುತ್ತಿದ್ದು, ತಾಯಿ ಕಾರ್ಡಿನಲ್ಲಿರುವ ಅಂಶಗಳನ್ನು, ತಂದೆ-ತಾಯಿ ಅರ್ಥಮಾಡಿಕೊಳ್ಳಬೇಕು. ರೋಟರಿ ಜ್ಯುಬಿಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
Rotary Club Shimoga ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರೋಟರಿ ಸಂಸ್ಥೆ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಅಧ್ಯಕ್ಷ ಬಿ.ಎಸ್.ಅಶ್ವಥ್ ಮಾತನಾಡಿ, ಈಗಾಗಲೇ ನಮ್ಮ ಕ್ಲಬ್ ವತಿಯಿಂದ 30ಕ್ಕಿಂತ ಹೆಚ್ಚು ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವಿಶ್ವಾದ್ಯಂತ ಈ ತಿಂಗಳ ಕಾರ್ಯಕ್ರಮವಾಗಿ ತಾಯಿ-ಮಗು ಆರೋಗ್ಯ ಕುರಿತು ಜನಜಾಗೃತಿ ನಡೆಸಲಾಗುತ್ತಿದೆ ಎಂದರು.
ಎಲ್ಲರಿಗೂ ಪೌಷ್ಠಿಕ ಆಹಾರದ ಪೊಟ್ಟಣವನ್ನು ರೋಟರಿ ಸದಸ್ಯರು ನೀಡಿದರು. ಎಸ್.ಎಸ್.ವಾಗೇಶ್ ಸ್ವಾಗತಿಸಿದರು, ಕಾರ್ಯದರ್ಶಿ ರೇವಣ ಸಿದ್ದಪ್ಪ ವಂದಿಸಿದರು, ಭಾರದ್ವಾಜ್, ಎನ್.ವಿ.ಭಟ್, ಉಮಾದೇವಿ ಇತರ ಸದಸ್ಯರು ಭಾಗವಹಿಸಿದ್ದರು.
Rotary Club Shimoga ಗರ್ಭಿಣಿಯರಿಗೆ ಸರ್ಕಾರವು ‘ ತಾಯಿ ಕಾರ್ಡ್ ” ಸೌಲಭ್ಯ ಕಲ್ಪಿಸಿದೆ, ಇದರಿಂದ ತಾಯಿಮಗುವಿನ ಆರೋಗ್ಯದ ಮಾಹಿತಿ- ಡಾ.ಉಮಾ
Date:
