Rotary Organization ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುವ ಜತೆಯಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವು ಒದಗಿಸುವ ಕೆಲಸ ಮಾಡುತ್ತಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ಅಧ್ಯಕ್ಷ ವಿಶ್ವನಾಥ ನಾಯಕ ಹೇಳಿದರು.
ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವೀನ್ ಎಂಬ ಪ್ಯಾಸೆಂಜರ್ ಆಟೋ ಚಾಲಕರಿಗೆ ತಕ್ಷಣದ ನೆರವು ಒದಗಿಸಿದರು. ನಂತರ ಮಾತನಾಡಿ, ಸಮಾಜದಲ್ಲಿ ಮಾನವೀಯತೆ, ಸೇವಾ ಮನೋಭಾವ ಮತ್ತು ಸಹಕಾರದ ನಿಜವಾದ ಮಾದರಿಯನ್ನು ತೋರಿಸಿರುವುದು ರೋಟರಿ ಸಂಸ್ಥೆ ಎಂದು ತಿಳಿಸಿದರು.
ವೈದ್ಯಕೀಯ ವೃತ್ತಿಯ ಧರ್ಮವನ್ನು ಕಾಪಾಡಿಕೊಂಡು, ಬಡ ರೋಗಿಗಳಿಗೆ ಸಹಾನುಭೂತಿಯಿಂದ ನೆರವಾಗುತ್ತಿರುವ ಡಾ. ಪ್ರದೀಪ್ ಅವರ ಸೇವಾ ಮನೋಭಾವವು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ನವೀನ್ ಅವರು ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದ ಬಳಲುತ್ತಿದ್ದು, ಅತೀವ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯಕೀಯ ವೆಚ್ಚದ ಭಾರವನ್ನು ಹೊರುವ ಸ್ಥಿತಿಯಲ್ಲಿಲ್ಲ. ಈ ವಿಚಾರ ತಿಳಿದು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಪದಾಧಿಕಾರಿಗಳು ನೆರವು ಒದಗಿಸಿದರು.
ಅಧ್ಯಕ್ಷ ವಿಶ್ವನಾಥ್ ನಾಯಕ ಅವರು ಹೆಚ್ಚಿನ ಮೊತ್ತವನ್ನು ನೀಡಿದರು. ಸದಸ್ಯರಾದ ರುಥ್ವಿಕ್ ಮಲ್ಲೇಶ್, ಇತರ ರೋಟರಿ ಮಿತ್ರರು ಸಹ ಕೈಜೋಡಿಸಿದರು.
Rotary Organization ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ಕಾರ್ಯದರ್ಶಿ ನಿತಿನ್ ಯಾದವ್, ಕ್ಲಬ್ ಸರ್ವೀಸ್ ನಿರ್ದೇಶಕ ರಾಜೇಂದ್ರ ಕುಮಾರ್, ಸುಜಯಾ ಇತರರು ಇದ್ದರು.
