Madhu Bangarappa ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಂದೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬಹಳ ದಿನದಿಂದ ಆಸ್ಪತ್ರೆಗೆ ದಿಢೀರ್ ಬರಬೇಕು ಅಂದುಕೊಂಡಿದ್ದೆ.ಇಂದು ಆಸ್ಪತ್ರೆಗೆ ಬಂದು ಭೇಟಿ ನೀಡಿ, ಮಾಹಿತಿ ಪಡೆದಿದ್ದೇನೆ.ಮೆಗ್ಗಾನ್ ಆಸ್ಪತ್ರೆಗೆ 2.5 ಸಾವಿರ ಜನ ಓಪಿಡಿಗೆ ಬರ್ತಿದ್ದಾರೆ.ಅಕ್ಕಪಕ್ಕದ ಜಿಲ್ಲೆಯಿಂದಲೂ ಕೂಡ ಸಾಕಷ್ಟು ಜನ ಇಲ್ಲಿಗೆ ಬರ್ತಿದ್ದಾರೆ ಎಂದರು.
ಮೆಗ್ಗಾನ್ ಭೋದನಾ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ವಿಭಾಗಕ್ಕೆ ಬರುತ್ತೆ.ಇನ್ನಷ್ಟು ಸೌಲಭ್ಯಗಳನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಒಂದಷ್ಟು ಸೌಲಭ್ಯ ಬೇಕಿದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಲೋಡ್ ಹೆಚ್ಚಾಗಿದೆ.
ಹೊಸ ಜಿಲ್ಲಾಸ್ಪತ್ರೆ ಮಾಡುವ ಬಗ್ಗೆ ಚರ್ಚೆಯೂ ನಡೆದಿದೆ.
ಇದರ ಬಗ್ಗೆ ದಿನೇಶ್ ಗುಂಡೂರಾವ್ ಜೊತೆ ಮಾತುಕತೆ ಆಗಿದೆ.
ಜಿಲ್ಲಾ ಆಸ್ಪತ್ರೆ ಇಲ್ಲಿಯೇ ಮಾಡಬೇಕು.
ಬೇರೆ ತಾಲೂಕಿನಲ್ಲಿ ಮಾಡಿದರೆ ಮತ್ತೆ ನಾವು ಈ ಹಿಂದೆ ಆರೋಪ ಮಾಡಿದ ಹಾಗೆ ಮಾಡುತ್ತಾರೆ.ಹಿಂದೆ ಶಿಕಾರಿಪುರದಲ್ಲಿ ಮಾಡಿದ್ದರು.
ಈಗ ಭದ್ರಾವತಿಯಲ್ಲಿ ಹೋಗಿ ಮಾಡಲು ಬರುವುದಿಲ್ಲ.
ಇಲ್ಲಿಯೇ ಜಿಲ್ಲಾ ಆಸ್ಪತ್ರೆ ಮಾಡಲು ಯೋಚಿಸೋಣ
ಸದ್ಯ ಈಗ ಇರುವ ಆಸ್ಪತ್ರೆ
ಅಪ್ ಡೇಟ್ ಮಾಡಬೇಕಿದೆ ಎಂದು ತಿಳಿಸಿದರು.
ಈಗಿರುವ ಮೆಗ್ಗಾನ್ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿಗೆ ಅಪ್ಡೇಟ್ ಮಾಡುವ ಯೋಚನೆಯಿದೆ.
ಎಂಆರ್‌ಐ ವಿಭಾಗದಿಂದ ರೋಗಿಗಳಿಗೆ ಡೇಟ್ ನೀಡುವ ಬಗ್ಗೆ ದೂರಿದೆ.
ತುರ್ತು ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾಡ್ತಾರೆ.
ಇಲ್ಲವಾದ್ರೇ ನಂತರದ ದಿನಾಂಕ ಕೊಡ್ತಾರೆ.ಒಂದು ಎಂಆರ್‌ಐ ಮಾಡೋಕೆ 45 ನಿಮಿಷ ಬೇಕು. ದಿನಕ್ಕೆ 20-25 ಕೇಸ್ ಆಗುತ್ತೆ.
ಮೆಡಿಸಿನ್ ಆನ್ ಲೈನ್ ಮಾಡಿರುವುದಕ್ಕೆ ಕಷ್ಟ ಆಗಿದೆ.
ಈ ಸಮಸ್ಯೆ ಬಗೆ ಹರಿಸೋಣ.
ಹೆರಿಗೆ ಆಸ್ಪತ್ರೆಯಲ್ಲಿ ನೀರು ಸರಬರಾಜು ಸರಿಯಾಗುತ್ತಿಲ್ಲ ಎಂಬ ದೂರಿದೆ ಎಂದರು.
ಆಸ್ಪತ್ರೆಯಲ್ಲಿ ಲೋಡ್ ಬಹಳ ಇದ್ದಾಗ ಈ ಸಮಸ್ಯೆ ಆಗೋದು ಸಹಜ ಎಂದು ತಿಳಿಸಿದರು.
