Dr. Yashoda Kashi ಸಾಮಾಜಿಕ ಕಾಳಜಿಯುಳ್ಳ ಗೀತಾ ಹೆಚ್ ಎಸ್ ಎನ್ ಪ್ರತಿಷ್ಠಾನವು ಅಮಾಸೆಬೈಲ್ ನಲ್ಲಿನ ಸರ್ಕಾರಿ ಶಾಲೆಗೆ ಎರಡೂವರೆ ಕೋಟಿ ರೂ ನೀಡಿ ಅಭಿವೃದ್ಧಿಪಡಿಸಿದೆ. ಶಾಲೆಗಳಲ್ಲಿ ಕುಡಿಯುವ ನೀರು, ಶಾಲಾಮಕ್ಕಳಿಗೆ ಸಮವಸ್ತ್ರ , ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಟ್ರಸ್ಟಿ ಮಸ್ತಾಕ್ ಅಹಮದ್ ಮೊದಲಿಗೆ ತಿಳಿಸಿದರು.
ಶಂಕರ ಐತಾಳರು, ಅಮಾಸೆ ಬೈಲ್ ಕುಗ್ರಾಮವಾಗಿದೆ. ಅಲ್ಲಿ ದೀಪದ ವ್ಯವಸ್ಥೆಗಾಗಿ ಸೌರ ದೀಪಗಳನ್ನು ಟ್ರಸ್ಟಿನ ವತಿಯಿಂದ ಸ್ಥಾಪಿಸಲಾಗಿದೆ ಎಂದರು.
ಫೌಂಡೇಶನ್ ಸ್ಥಾಪನೆಯಾಗಿ ಏಳು ಸಂವತ್ಸರ ಪೂರೈಸುತ್ತಿದೆ. ಇದರ ಸ್ಮರಣಾರ್ಥವಾಗಿ ಸಮಾಜದ ಏಳು ಮಂದಿ
ಸಾಧಕರಿಗೆ ಮನೆಗೇ ತೆರಳಿ ಪುರಸ್ಕಾರ ನೀಡುವ ” ಸಪ್ತ ಸಂಭ್ರಮ” ಯೋಜನೆ ಆರಂಭಿಸಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ
ಶಿವಮೊಗ್ಗದ ಖ್ಯಾತ ಚರ್ಮರೋಗ ತಜ್ಞೆ ಡಾ.ಯಶೋದಾ ಕಾಶಿ ಅವರಿಗೆ ಮುಖತಃ ಟ್ರಸ್ಟಿನ ವತಿಯಿಂದ ಎಲ್ಲರೂ ಡಾ.ಯಶೊಇದಾ ಅವರ ಸ್ವಗೃಹದಲ್ಲಿ ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಟ್ರಸ್ಟಿನ ಖಜಾಂಚಿ ಶ್ರೀನಿವಾಸ ಅಡಿಗ ಮಾತನಾಡಿ, ದುರ್ಬಲರಿಗೆ ಮನೆ ನಿರ್ಮಿಸಲು,ಮನೆ ರಿಪೇರಿಗೆ, ವಿದ್ಯಾರ್ಥಿಗಳಿಗೆ ಅಧ್ಯಯನ ಮುಂದುವರೆಸಲು ಟ್ರಸ್ಟ್ ನೆರವು ನೀಡುತ್ತಿದೆ ಎಂದು ಏಳು ವರ್ಷಗಳಲ್ಲಿ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. ಟ್ರಸ್ಟಿನ ಶ್ರೀಧರ ಹೆಗಡೆ ಸನ್ಮಾನ ಪತ್ರ ವಾಚನ ಮಾಡಿದರು.
Dr. Yashoda Kashi ಕೆಲೈವ್ ನ್ಯೂಸ್ ಪೋರ್ಟಲ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ ಅವರು ” ಡಾ. ಯಶೋದಾ ಕಾಶಿ ಅವರು ತಮ್ಮೆಲ್ಲಾ ದೈಹಿಕ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಯಶ ಸಾಧಿಸಿದ್ದಾರೆ. ಚರ್ಮರೋಗ ವಿಷಯವು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲಾಗದ ಅಂದಿನ ಸಂದರ್ಭದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಆರಿಸಿಕೊಂಡರು. ತಮ್ಮ ಸೇವಾವಧಿಯಲ್ಲಿ ಕುಷ್ಠರೋಗಿಗಳನ್ನೂ ಉಪಚರಿಸಿರುವುದು ಅವರ ಸೇವಾ ಮನೋಭಾವಕ್ಕೆ ಉದಾಹರಣೆ. ಇಂದು ಶಿವಮೊಗ್ಗ ಪ್ರದೇಶದ ಕೆಲವೇ ಚರ್ಮರೋಗ ಚಿಕಿತ್ಸಾ ಪರಿಣಿತರಲ್ಲಿ ಓರ್ವರಾಗಿ ಹೆಸರು ಪಡೆದಿದ್ದಾರೆ. ಅವರ ಈ ಸಾಧನೆ ಯುಜನರಿಗೆ ಒಂದು ಮಾದರಿ “ಎಂದು ಶ್ಲಾಘಿಸಿದರು.
ಡಾ.ಯಶೋದಾ ಕಾಶಿ ಅವರಿಗೆ ಟ್ರಸ್ಟಿನ ವತಿಯಿಂದ ಸ್ಮರಣಿಕೆ, ಪುಷ್ಪಗುಚ್ಛ, ಸಾಂಪ್ರದಾಯಿಕ ಪೇಟ, ಶಾಲು ಹೊದಿಸಿ ಹಾರ್ದಿಕವಾಗಿ ಸನ್ಮಾನಿಸಲಾಯಿತು. ತಮ್ಮ ಸಾಧನೆ ಏನಿದ್ದರೂ ಅದು ಸಮಾಜಕ್ಕೆ ತೀರಿಸಿದ ಋಣ. ಕುಟುಂಬದವರ ಸಹಕಾರದಿಂದ ಇಷ್ಟೆಲ್ಲ ಸೇವೆ ಸಲ್ಲಿಸುವಂತಾಗಿದೆ ಎಂದು ಕೃತಜ್ಞತೆ ಅರ್ಪಿಸಿದರು.
