ಹಿಂದೂ ಧರ್ಮದ ಸನಾತನ ಪರಂಪರೆಯಲ್ಲಿ ನಿತ್ಯ ಸಂಧ್ಯಾವಂದನೆ, ಗಾಯತ್ರಿ ಪಠಣ ಮಾಡಬೇಕು. ಇದರಿಂದ ಆತ್ಮಬಲ, ಮನೋಬಲ ವೃದ್ಧಿಯಾಗುತ್ತದೆ. ಶರೀರದ ತೇಜಸ್ಸು ವೃದ್ಧಿಯಾಗುತ್ತದೆ ಎಂದು ವಿದ್ವಾನ್ ಸಂತೋಷ್ ಎನ್.ಭಟ್ ಹೇಳಿದರು.
ದೇವಜ್ಞ ಕಲ್ಯಾಣ ಮಂದಿರದಲ್ಲಿ ಶ್ರೀ ದೈವಜ್ಞ ಗುರುಪೀಠ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ 4 ದಿನದ ಸಂಧ್ಯಾವಂದನೆ ಮತ್ತು ದೇವಪೂಜೆ ಕಲಿಕಾ ಶಿಬಿರ ನಡೆಸಿಕೊಟ್ಟ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಮಾರೋಪದಲ್ಲಿ ಮಾತನಾಡಿ, ಸಂಧ್ಯಾವಂದನೆ ಮಾಡುವುದರಿಂದ ಒಳಿತಾಗುತ್ತದೆ ಎಂದು ತಿಳಿಸಿದರು.
ಇಂದಿನ ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ಕಾಲದಲ್ಲಿಯೂ ಸನಾತನ ಧರ್ಮದಲ್ಲಿ ತಿಳಿಸಿರುವ ಧಾರ್ಮಿಕ ಆಚರಣೆಗಳನ್ನು ತಪ್ಪದೇ ಪಾಲಿಸಬೇಕು. ಈ ತರಹದ ಧಾರ್ಮಿಕ ಕಲಿಕಾ ಶಿಬಿರಗಳು ಕಾಲಕಾಲಕ್ಕೆ ನಡೆಯಬೇಕು. ದೈವಜ್ಞ ಗುರುಪೀಠ ಸಮಿತಿ ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ ಎಂದರು
ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಸಂತೋಷ್ ಭಟ್ ಅವರನ್ನು ಸನ್ಮಾನಿಸಲಾಯಿತು. ನಾಲ್ಕು ದಿನದ ಶಿಬಿರದಲ್ಲಿ ಹಾಜರಾದ 100ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಶ್ರೀ ದೇವಜ್ಞ ಗುರುಪೀಠ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಅವರು ಸಂಧ್ಯಾವಂದನೆ ಹಾಗೂ ದೇವಪೂಜೆ ಕಲಿಕಾ ಪುಸ್ತಕವನ್ನು ವಿತರಿಸಿದರು.
ದೈವಜ್ಞ ಸಮಾಜದ ಅಧ್ಯಕ್ಷ ಎಸ್.ಪಾಂಡುರಂಗ ಶೇಟ್, ಮಾಜಿ ಅಧ್ಯಕ್ಷ ಜನಾರ್ಧನ ಎಂ ಶೇಟ್, ಕಮಲಾಕ್ಷರ, ಗುರುರಾಜ ಎಂ ಶೇಟ್, ನಿರ್ದೇಶಕರಾದ ಸುಧಾಕರ್, ರಾಘವೇಂದ್ರ, ಪ್ರಶಾಂತ ಸಿ ರಾಯ್ಕರ್, ಮಹಿಳಾ ಸಮಾಜದ ಅಧ್ಯಕ್ಷೆ ಸೀಮಾ ಸದಾನಂದ ಉಪಸ್ಥಿತರಿದ್ದರು.
