Prerana Blood Donors Association ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಲು ಸಹಾಯವಾಗುತ್ತದೆ ಅಲ್ಲದೆ ದೈಹಿಕ ಹಾಗೂ ಮಾನಸಿಕ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಸ್ವಯಂ ಪ್ರೇರಿತ ರಕ್ತ ದಾನಿಗಳ ಸಂಘದ ಮಾಜಿ ಅಧ್ಯಕ್ಷರಾದ ಜಿ ವಿಜಯ್ ಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು
ಪ್ರೇರಣ ರಕ್ತದಾನಿಗಳ ಬಳಗ, ದೇವಾಲಯ ಸಂವರ್ಧನ ಸಮಿತಿ ಶಿವಮೊಗ್ಗ ನಗರ ಇವರು ಇತರೇ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ. ಇಂದು ವಿದ್ಯಾನಗರದ ಗಣಪತಿ ದೇವಸ್ಥಾನ ಯಾಲ ಕಪ್ಪನ ಕೇರಿ ಆವರಣದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ತಮ್ಮವೃತ್ತಿ ವ್ಯವಹಾರ, ಗಳ ಮಧ್ಯದಲ್ಲಿ ಇಂತಹ ಶಿಬಿರ ಏರ್ಪಡಿಸುವುದು ಅತ್ಯಂತ ಶ್ರೇಷ್ಠವಾದ ಕೆಲಸ, ರಕ್ತದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲವೆಂದು ತಿಳಿಸಿದರು.
Prerana Blood Donors Association ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ರತ್ನಾಕರ ಶನೈ ರವರು ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಉಪಸ್ಥಿತರಿದ್ದ ವೈದ್ಯಾಧಿಕಾರಿಗಳು, ಹಿರಿಯ ರಕ್ತದಾನಿ ಧರಣೇಂದ್ರ ದಿನಕರ್ ಮತ್ತಿತರು ಸುರಕ್ಷಿತ ರಕ್ತದಾನದ ಮಹತ್ವದ ಬಗ್ಗೆ ಸಭೆಗೆ ವಿವರಿಸಿದರು . ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಸದಸ್ಯರಾದ ಶ್ರೀಯುತ ಆರ್ ಮನೋಹರ್, ಯಾಲಪ್ಪ ಕೇರಿ ವಿದ್ಯಾನಗರ ಲಕ್ಷ್ಮಣ್ ಆರ್. ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆ ರಕ್ತದಾನಿಗಳು ಪಾಲ್ಗೊಂಡಿದ್ದರು.
