Adichunchanagiri Mutt ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಆದ್ದರಿಂದ ಅವರಲ್ಲಿ ಶಿಸ್ತು,ಆಚಾರ, ವಿಚಾರ,ಸಂಸ್ಕೃತಿಯನ್ನು ಮೈಗೂಡಿಸಿ, ದೇಶದ ಆಸ್ತಿಗಳನ್ನಾಗಿ ಮಾಡಬೇಕಾಗಿದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ನಾದಮಯಾ ನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲೆಯ ಪ್ರಿ ಕೆ ಜಿ ಮತ್ತು ಎಲ್ ಕೆ ಜಿ ಪುಟಾಣಿ ಮಕ್ಕಳಿಗೆ ಬಿ ಜಿ ಎಸ್ ಸಭಾಭವನದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ,ಅಕ್ಷರಾಭ್ಯಾಸವು ಮಗುವಿನ ಶಿಕ್ಷಣದ ಆರಂಭವನ್ನು ಸೂಚಿಸುವ ಒಂದು ಮಹತ್ವದ ಆಚರಣೆಯಾಗಿದೆ. ಇದು ಮಗುವಿಗೆ ಜ್ಞಾನ ಮತ್ತು ಕಲಿಕೆಯ ಮಾರ್ಗವನ್ನು ತೆರೆಯುತ್ತದೆ ಎಂದು ನಂಬಲಾಗಿದೆ.
ಮಗುವಿನ ತಂದೆ ಅಥವಾ ಗುರುವು ಮಗುವಿನ ಕೈ ಹಿಡಿದು, ಸ್ಲೇಟ್ ಅಥವಾ ತಟ್ಟೆಯಲ್ಲಿ ಅಕ್ಕಿಯ ಮೇಲೆ ಓಂ, ಶ್ರೀ, ಮತ್ತು ಇತರ ದೇವರ ಹೆಸರುಗಳನ್ನು ಬರೆಯುತ್ತಾರೆ. ನಂತರ, ಮಗುವು ತಾನೇ ಅಕ್ಷರಗಳನ್ನು ಬರೆಯಲು ಪ್ರಯತ್ನಿಸುತ್ತದೆ ಎಂದು ಪೂಜ್ಯರು ತಿಳಿಸಿದರು.
Adichunchanagiri Mutt ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ಮಾಸಪ್ಪಗೌಡ, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಪೋಷಕರು,ಶಿಕ್ಷಕರು ಇನ್ನು ಮುಂತಾದವರು ಉಪಸ್ಥಿತರಿದ್ದರು.
