Wednesday, May 6, 2026
Wednesday, May 6, 2026

Adichunchanagiri Education Trust ಶಿವಮೊಗ್ಗದಲ್ಲಿ ಆಗಸ್ಟ್ 11 ರಿಂದ 14 ವರೆಗೆ “ಚುಂಚಾದ್ರಿ ಕಪ್” ವಾಲಿಬಾಲ್ ಪಂದ್ಯಾವಳಿ

Date:


Adichunchanagiri Education Trust ಪದ್ಮಭೂಷಣ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ,
ಪ್ರತಿವರ್ಷದಂತೆ ಈ ವರ್ಷವೂ ಸಹ ಶಿವಮೊಗ್ಗ ನಗರದ ಕ್ರೀಡಾ ಪ್ರೇಮಿಗಳಿಗಾಗಿ ಹಾಗೂ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್( ರಿ )ಶಿವಮೊಗ್ಗ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ “ಚುಂಚಾದ್ರಿ ಕಪ್ 2025” ರ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರಿಗಾಗಿ ಆಗಸ್ಟ್ 11 ರಿಂದ 14 ರವರೆಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು,
ಈ ಕ್ರೀಡಾ ಕೂಟದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದು, ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಿಸುವರು.

ತಮ್ಮ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರ ತಂಡಗಳನ್ನು ಈ ಸ್ಪರ್ಧೆಗೆ ಕಳುಹಿಸಿ, ಚುಂಚಾದ್ರಿ ಕಪ್ 2025 ನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರುತ್ತೇವೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕಡ್ಡಾಯವಾಗಿ ತಮ್ಮ ಶಾಲೆಯ ಕ್ರೀಡಾಪಟುಗಳ ಜೊತೆಯಲ್ಲಿ ಇರತಕ್ಕದ್ದು, ಒಂದು ವೇಳೆ ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಜೊತೆ ಇಲ್ಲದ ತಂಡಗಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

Adichunchanagiri Education Trust ಜೊತೆಗೆ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರವನ್ನು ತರಬೇತಿದಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ತರತಕ್ಕದ್ದು.
ತಮ್ಮ ತಂಡಗಳ ನೋಂದಣಿಗಾಗಿ ನಾವು ಕಳುಹಿಸಿರುವ ನೋಂದಣಿ ಪತ್ರದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡಿ ಪ್ರಾಂಶುಪಾಲರು,ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಶರಾವತಿ ನಗರ, ಶಿವಮೊಗ್ಗ ಇವರಿಗೆ 03-8 – 2025 ರೊಳಗಾಗಿ ಕಳುಹಿಸಿಕೊಡಲು ಕೋರಲಾಗಿದೆ.

ವಿ. ಸೂ : ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.17 ವರ್ಷ ವಯೋಮಿತಿ ಮೀರಿರಬಾರದು (01-01-2009 ರ ನಂತರ ಜನಿಸಿರಬೇಕು )
ಕಡ್ಡಾಯವಾಗಿ 18 ಕಾಲಂ ಇರುವ ಗುರುತಿನ ಚೀಟಿ ತರಬೇಕು (ಇತ್ತೀಚಿನ ಭಾವಚಿತ್ರದೊಂದಿಗೆ ), ವಿದ್ಯಾರ್ಥಿಗಳ ಆಧಾರ ಗುರುತಿನ ಕಾರ್ಡ್, SATS ನಂಬರ್ ಹಾಗೂ ಶಾಲೆಯ ಡೈಸ್ ಕೋಡ್ ಕಡ್ಡಾಯವಾಗಿರುತ್ತದೆ.

9945833464,8971452532,,8884483484 ,6361711504 ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸಂಸ್ಥೆಯ ಪ್ರಾಂಶುಪಾಲರಾದ ಕುಮಾರಿ, ದಿವ್ಯಾ ಕರಣಮ್ ರವರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಎತ್ತರಗಳನ್ನ ಸಾಧಿಸಿ,ದೇಶದವಾಭಿವೃದ್ಧಿಗೆ ಕೊಡುಗೆ ನೀಡಿ- ಗೌ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Kuvempu University “ಕೇವಲ ಉದ್ಯೋಗಾಕಾಂಕ್ಷಿಯಾಗಿರದೆ ಅವಕಾಶಗಳ ಸೃಷ್ಟಿಕರ್ತರಾಗಿ. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ...

S.N. Channabasappa ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಸೇವೆ ಅಪ್ರತಿಮ- ಎಸ್.ಎನ್.ಚನ್ನಬಸಪ್ಪ

S.N. Channabasappa "ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ...

MESCOM ಮೇ 7 ಮತ್ತು 8 ರಂದು ಶಿವಮೊಗ್ಗದ ಅಚ್ಯುತ್ ರಾವ್ ಲೇಔಟ್,ಜೈಲ್ ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ...