Friday, March 20, 2026
Friday, March 20, 2026

Chamber Of Commerce Shivamogga ಜುಲೈ 23 ರಿಂದ 25 ಶಿವಮೊಗ್ಗದಲ್ಲಿ ” ಟ್ರೇಡ್ ‌ಲೈಸನ್ಸ್ ಬೃಹತ್ ಮೇಳ”ಉದ್ದಿಮೆ ಪರವಾನಗಿ ಬಯಸುವ ಆಸಕ್ತರಿಗೆ ಸುವರ್ಣಾವಕಾಶ

Date:

Chamber Of Commerce Shivamogga ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಮಹಾನಗರಪಾಲಿಕೆ, ಶಿವಮೊಗ್ಗ ಸಹಭಾಗಿತ್ವದೊಂದಿಗೆ ಪ್ರತಿ ವರ್ಷದಂತೆ ಮೂರು ದಿನಗಳ ಕಾಲ “ಉದ್ದಿಮೆ ಪರವಾನಿಗೆ” (ಟ್ರೇಡ್ ಲೈಸೆನ್ಸ್) ನೀಡುವ ಬೃಹತ್ ಮೇಳವನ್ನು ಆಯೋಜಿಸಲಾಗಿದೆ. ಉದ್ದಿಮೆ ಪರವಾನಗಿಯನ್ನು ಪಡೆದುಕೊಳ್ಳಲು ಉದ್ದಿಮೆದಾರರಿಗೆ ಅನುಕೂಲವಾಗುವ ನೆಲೆಯಲ್ಲಿ ಮಹಾನಗರಪಾಲಿಕೆಯಿಂದ ಸರಳೀಕೃತಗೊಳಿಸಿದ್ದು, ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿಯೊಬ್ಬ ಉದ್ದಿಮೆದಾರರು, ವರ್ತಕರು ಪರವಾನಗಿ ಪಡೆಯುವುದಲ್ಲದೆ ತಮ್ಮ ಅಕ್ಕಪಕ್ಕದ ವ್ಯಾಪರಸ್ಥರಿಗೆ ಮಾಹಿತಿ ನೀಡಿ “ಟ್ರೇಡ್ ಲೈಸೆನ್ಸ್” ಪಡೆದುಕೊಳ್ಳಲು ಕೋರಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿAದ ಬೃಹತ್ ಮೇಳವನ್ನು ಮೂರು ದಿನಗಳ ಕಾಲ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಮಾನ್ಯ ಸದಸ್ಯರು ನಗರದ ಉದ್ದಿಮೆದಾರರು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯದರ್ಶಿ ಎ.ಎಂ. ಸುರೇಶ್‌ರವರು ಸಂಘದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Chamber Of Commerce Shivamogga ಉದ್ದಿಮೆ ಪರವಾನಗಿ ನಮೂನೆಯೊಂದಿಗೆ ನವೀಕರಿಸಲು ಕಳೆದ ವರ್ಷದ ೧) ಲೈಸೆನ್ಸ್ ಪ್ರತಿ, ೨)ಪಾನ್‌ಕಾರ್ಡ್ ಪ್ರತಿ, ೩) ಮೊಬೈಲ್ ನಂಬರ್ ಮತ್ತು ಹೊಸದಾಗಿ ಪರವಾನಗಿ ಪಡೆಯುವವರು ಈ ಕೆಳಕಾಣಿಸಿದ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಪರವಾನಗಿ ಪಡೆಯಲು ಕೋರಲಾಗಿದೆ.

೧. ಅರ್ಜಿದಾರರ ಪಾಸ್‌ಪೋರ್ಟ್ ಭಾವಚಿತ್ರ, ೨. ಮುನಿಸಿಪಲ್ ಖಾತಾ ನಕಲು/ಪಹಣೆ/ಬಾಡಿಗೆ ಕರಾರು ೪. ಆಧಾರ್ ಕಾರ್ಡ್ ೫. ವಿದ್ಯುಚ್ಛಕ್ತಿ ಬಿಲ್ ೬. ಮೊಬೈಲ್ ನಂಬರ್ ೭. ಪಾನ್‌ಕಾರ್ಡ್ ೮. ಇ-ಮೇಲ್ ಐಡಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...