Country Club Shivamogga ವ್ಯಾಪಾರಸ್ಥರಿಗೆ ಉದ್ಯಮ ವಹಿವಾಟು ವಿಸ್ತರಿಸಿಕೊಳ್ಳಲು ಆರ್‌ಎಂಬಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ರೋಟರಿ ಆರ್‌ಎಂಬಿ ಶಿವಮೊಗ್ಗ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಜತೆಯಲ್ಲಿ ಬೇರೆ ಎಲ್ಲ ಕಡೆ ಅರ್‌ಎಂಬಿ ಸ್ಥಾಪಿಸಬೇಕು. ಇದರ ಸದುಪಯೋಗ ನಮ್ಮ ಬೇರೆ ಜಿಲ್ಲೆಯಲ್ಲಿರುವ ರೋಟೆರಿ ಸದಸ್ಯರಿಗೂ ಸಿಗುವಂತೆ ಆಗಬೇಕು ಎಂದು ತಿಳಿಸಿದರು.
ಆರ್‌ಎಂಬಿ ಶಿವಮೊಗ್ಗ ಸ್ಥಾಪಕ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ ಆರ್‌ಎಂಬಿ ಸಂಸ್ಥೆ ನಡೆದು ಬಂದ ದಾರಿ ಹಾಗೂ ಅದರ ಕಾರ್ಯವೈಖರಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಿಕಟಪೂರ್ವ ಅಧ್ಯಕ್ಷ ಮೋಹನ್ ಎಚ್.ಎಸ್. ಮಾತನಾಡಿ ಅವರ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಸದಸ್ಯರಿಗೂ ಕೃತಜ್ಞತೆ ತಿಳಿಸಿದರು.
ರೋಟರಿ ಆರ್‌ಎಂಬಿ ಶಿವಮೊಗ್ಗದ ನೂತನ ಅಧ್ಯಕ್ಷರಾಗಿ ಕಿರಣ್ ಕುಮಾರ್ ಜಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಕೇಳಿ ಅವರ ಕಾರ್ಯಕಾರಿ ಮಂಡಳಿಯನ್ನು ಸಭೆಗೆ ಪರಿಚಯಿಸಿದರು.
ಉಪಾಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಮಂಜುನಾಥ್ ರಾವ್ ಕದಂ, ಸಹ ಕಾರ್ಯದರ್ಶಿಯಾಗಿ ಎಸ್ ಪಿ ಶಂಕರ್, ಖಜಾಂಚಿಯಾಗಿ ನೆಪ್ಚೂನ್ ಕಿಶೋರ್ ಕುಮಾರ್, ನಿರ್ದೇಶಕರಾಗಿ ಜಿ.ವಿಜಯಕುಮಾರ್, ಬಸವರಾಜ.ಬಿ, ಚಂದ್ರು ಜೆಪಿ, ಗೋವರ್ಧನ್, ಆರ್ ಎಂ ಬಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Country Club Shivamogga ನಿಕಟಪೂರ್ವ ಕಾರ್ಯದರ್ಶಿ ರವೀಂದ್ರನಾಥ್ ಐತಾಳ್, ವಲಯ 11ರ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣಗೌಡ, ವಲಯ 10ರ ಸಹಾಯಕ ಗವರ್ನರ್ ಕೆಪಿ.ಶೆಟ್ಟಿ, ನೂತನ ಕಾರ್ಯದರ್ಶಿ ಮಂಜುನಾಥ್ ರಾವ್ ಕದಂ, ವಲಯ 10 ಮತ್ತು 11ರ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿರುವ ಎಲ್ಲಾ ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
