ಶಿಕಾರಿಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಹಾಗೂ ಸಾರ್ವಜನಿಕರು ಖಾಸಗಿ ಆಸ್ಪತ್ರೆ ಅವಲಂಬಿತರಾಗುವಂತಾಗಿದೆ ಕೂಡಲೇ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರ ಅವಧಿಯಲ್ಲಿ ಕೋಟ್ಯಾಂತರ ಅನುದಾನ ಮಾಡಿ ತಾಲೂಕು ಮಟ್ಟದ ಆಸ್ಪತ್ರೆಯನ್ನು ಜಿಲ್ಲಾ ದರ್ಜೆಗೆ ಏರಿಸಿ ಸುಸಜ್ಜಿತ ಕಟ್ಟಡ ಹಾಗೂ ಡಯಾಲಿಸಿಸ್ ಸೇರಿದಂತೆ ನುರಿತ ವೈದ್ಯರನ್ನು ನೇಮಿಸುವ ಮೂಲಕ ಕೇವಲ ಶಿಕಾರಿಪುರ ಮಾತ್ರವಲ್ಲದೆ ಸುತ್ತಮುತ್ತ ತಾಲೂಕಿನ ಜನತೆ ಹಾಗೂ ಅಕ್ಕಪಕ್ಕದ ಜಿಲ್ಲೆಯವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸುತ್ತಿರುತ್ತಾರೆ. ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ಕೂಡ ವೈದ್ಯರ ಕೊರತೆಯಿಂದ ಅನಾನುಕೂಲವಾಗಿದೆ ಎಂದು ಆರೋಪಿಸಿದರು.
ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ಮೂರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ರೋಗದ ತಜ್ಞ ವೈದ್ಯರಿಲ್ಲದೆ ರೋಗಿಗಳು, ಬಡವರು, ಸಾಲ ಮಾಡಿ ಹೆಚ್ಚಿನ ಹಣ ತೆತ್ತು ಶಿವಮೊಗ್ಗ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಒದಗಿ ಬಂದಿದೆ ಎಂದರು.
ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರಘುವೀರ್ ಸಿಂಗ್ ರವರು ಮಾತನಾಡಿ ಜನಪ್ರತಿನಿಧಿಗಳ ಬೇ ಜವಾಬ್ದಾರಿಯಿಂದ ಹಾಗೂ ಜಿಲ್ಲಾ ಆಡಳಿತದ ಬೇಜವಾಬ್ದಾರಿಯಿಂದ ಈ ರೀತಿಯ ಅನಾನುಕೂಲವಾಗಿದೆ ಕೂಡಲೇ ಸರಿಪಡಿಸುವಂತೆ ಆಗ್ರಹಿಸಿದರು.
ಕೂಡಲೇ ವೈದ್ಯರನ್ನು ನೇಮಿಸದಿದ್ದರೆ ಜೈ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶಿಕಾರಿಪುರ ತಾಲೂಕು ಆಸ್ಪತ್ರೆಯ ಆವರಣದ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮುಖಂಡ ವಿನೋದ್, ಹಾಗೂ ಶಿಕಾರಿಪುರ ತಾಲೂಕಿನ ಜಯ ಕರ್ನಾಟಕ ಜನಪರ ವೇದಿಕೆ ಮುಖಂಡರಾದ ಅಕ್ರಂ ಆಲಿ, ಮಟ್ಟಿಕೋಟೆ ಮಾಲತೇಶ್, ಇಮ್ರಾನ್, ನವೀನ್, ಸುನಿಲ್, ಸೈಯದ್, ಮಧು, ವೆಂಕಟೇಶ್ ಸೇರಿದಂತೆ ಹಲವರಿದ್ದರು.
ಶಿಕಾರಿಪುರ ಆಸ್ಪತ್ರೆಗೆ ಮೂಳೆ & ಕೀಲು ತಜ್ಞವೈದ್ಯರನ್ನ ಕೂಡಲೇ ನೇಮಿಸಲು ಆಗ್ರಹಿಸಿ ಮನವಿ
Date:
