Guru Poornima ಗುರುಪೂರ್ಣಿಮೆ ಆಚರಣೆಯು ಗುರು ಶಿಷ್ಯರ ಸಂಬಂಧ, ಅನುಬಂಧ, ಬಾಂಧವ್ಯ ವೃದ್ಧಿಸುತ್ತದೆ ಎಂದು ದೈವಜ್ಞ ಗುರುಪೀಠ ಸಮಿತಿ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಹೇಳಿದರು.
ದೈವಜ್ಞ ಬ್ರಾಹ್ಮಣ ಗುರುಪೀಠ ಸೇವಾ ಸಮಿತಿ ಮತ್ತು ಶ್ರೀ ಜ್ಞಾನೇಶ್ವರಿ ಗೋಶಾಲೆ ವತಿಯಿಂದ ನಗರದ ಜೈಲ್ ಸರ್ಕಲ್‌ನಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಸಂಧ್ಯಾವಂದನೆ ಮತ್ತು ದೇವಪೂಜೆ ಕಲಿಕಾ ಶಿಬಿರದಲ್ಲಿ ಮಾತನಾಡಿ, ಪ್ರತಿ ವರ್ಷ ಆಷಾಢಪೂರ್ಣಿಮೆಯಂದು ಗುರುಪೂರ್ಣಿಮೆ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಹಿಂದುಗಳ ಮಹಾಕಾವ್ಯ ರಚಿಸಿದ ಮಹಾಭಾರತದ ಮಹರ್ಷಿ ವೇದವ್ಯಾಸ ಜನ್ಮದಿನ ವ್ಯಾಸಪೂರ್ಣಿಮೆ ಎಂದು ಕರೆಯುತ್ತಾರೆ. ಅಂಧಕಾರವನ್ನು ದೂರ ಮಾಡಿ, ಜ್ಞಾನ ಎಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು. ಜೀವನದಲ್ಲಿ ಸರಿದಾರಿ ತೋರುವ ಮಾರ್ಗದರ್ಶಕ ಗುರು ಆಗಿರುತ್ತಾರೆ ಎಂದರು.
ಮಕ್ಕಳಿಗೆ ಬಾಲ್ಯದಿಂದಲೇ ಸಂಪ್ರದಾಯ ಆಚರಣೆಗಳನ್ನು ಕಲಿಸಲು ಪಾಲಕರು ಮುಂದಾಗಬೇಕು. ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗಬೇಕು ಎಂದು ಸಲಹೆ ನೀಡಿದರು.
Guru Poornima ಗುರುಪೂಜೆ ನಂತರ ಸಮಾಜದ ಜನರಿಗೆ ವೇದಮೂರ್ತಿ ಸಂತೋಷ್ ಎನ್.ಭಟ್ ಅವರ ಮಾರ್ಗದರ್ಶನದಲ್ಲಿ ನಾಲ್ಕು ದಿನಗಳ ಶಿಬಿರ ನಡೆಯಿತು.
