Sunday, December 7, 2025
Sunday, December 7, 2025

Kanaada Yoga & Research Foundation ಚಾರಣಪ್ರಿಯರೇ, ಜುಲೈ 20ರಂದು “ಆಗುಂಬೆ ಸೋಮೇಶ್ವರ ಮಳೆ ಚಾರಣಕ್ಕೆ ಬರುವಿರಾ?” ಇಲ್ಲಿದೆ ಮಾಹಿತಿ

Date:

Kanaada Yoga & Research Foundation ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಋತುಮಾನಕ್ಕೆ ತಕ್ಕಂತೆ ಕೈಗೊಳ್ಳಬಹುದಾದ ಪ್ರವಾಸಗಳಲ್ಲಿ “ಆಗುಂಬೆ ಸೋಮೇಶ್ವರ” ಮಳೆನಡಿಗೆಯು ಪ್ರವಾಸಿ ಚಾರಣಿಗರಿಗೆ ವಿಶಿಷ್ಠವಾದ ಅನುಭವವನ್ನು ನೀಡುತ್ತದೆ.

ಮಳೆ ನಡಿಗೆಯು ಅಪ್ಪಟ ಮಲೆನಾಡಿನ ದೃಶ್ಯ ಕಾವ್ಯವನ್ನೇ ಉಣಬಡಿಸುತ್ತದೆ.
ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಆಗುಂಬೆಯು ಮಲೆನಾಡಿನ ಸ್ವರ್ಗದಂತಿದೆ. ಪ್ರತಿ ವರ್ಷದ ಮಳೆಗಾಲದ‌ ಸಮಯದಲ್ಲಿ “ಕಣಾದ ಯೋಗ & ರಿಸರ್ಚ್ ಫೌಂಡೇಷನ್” ವತಿಯಿಂದ “ಮಳೆ ನಡಿಗೆ”ಯ ಕಾರ್ಯಕ್ರಮಗಳನ್ನು ಶಿವಮೊಗ್ಗ ಜಿಲ್ಲೆಯ ಅತಿ ಹೆಚ್ಚು ಮಳೆ ಬೀಳುವ ವಿವಿಧ ಸ್ಥಳಗಳಲ್ಲಿ ಒಂದು ದಿನದ ಪ್ರವಾಸವನ್ನು ಏರ್ಪಡಿಸುವ ಮೂಲಕ ಹಮ್ಮಿಕೊಳ್ಳಲಾಗುತ್ತದೆ.

10 ನೇ ವರ್ಷದ” ಮಳೆ ನಡಿಗೆಯ ಅಂಗವಾಗಿ ಈ ಬಾರಿ ಮತ್ತೆ “ಆಗುಂಬೆ ಸೋಮೇಶ್ವರ” ಕ್ಕೆ ಮಳೆ ನಡಿಗೆಯ ಪ್ರವಾಸವನ್ನು ಏರ್ಪಡಿಸಲಾಗಿದೆ.ಜುಲೈ 20 ರ ಭಾನುವಾರದಂದು ಬೆಳಿಗ್ಗೆ 6 ಕ್ಕೆ ಮಿನಿ ಬಸ್ ಗಳಲ್ಲಿ ಶಿವಮೊಗ್ಗದಿಂದ ಆಗುಂಬೆ ತಲುಪಿ,ಅಲ್ಲಿನ ಸೂರ್ಯಾಸ್ತಮಾನ ಗೋಪುರದಿಂದ ಸೋಮೇಶ್ವರ ದೇವಾಲಯದವರೆಗೂ 14 ತಿರುವುಗಳಲ್ಲಿ ಮಳೆಯಲ್ಲಿ ನೆನೆಯುತ್ತಾ,ನಡೆಯುತ್ತಾ ,ಸಣ್ಣಪುಟ್ಟ ಫಾಲ್ಸ್ ಗಳನ್ನು ನೋಡುತ್ತಾ ನಡೆಯುವುದೇ ಒಂದು ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ.

ಸೋಮೇಶ್ವರದಿಂದ ಬಸ್ ಗಳಲ್ಲಿ ಆಗುಂಬೆಗೆ ವಾಪಸಾದ ನಂತರ ಹತ್ತಿರದ ಫಾಲ್ಸ್ ಮತ್ತು ಅಪರೂಪದ ಸ್ಥಳಗಳಿಗೆ ಭೇಟಿ ನೀಡಿ, ರಾತ್ರಿ 9•30 ರ ಹೊತ್ತಿಗೆ ಶಿವಮೊಗ್ಗ ತಲುಪಲಾಗುತ್ತದೆ.ಈ ಪ್ರವಾಸದಲ್ಲಿ ಪರಿಸರ ಸ್ವಚ್ಛತೆ, ಪರಿಸರ ಅಧ್ಯಯನ ಮತ್ತು ಪ್ರವಾಸಿ ಸ್ಥಳಗಳ ಇತಿಹಾಸವನ್ನು ಅರಿಯಬಹುದಾಗಿದೆ.”ವಸುದೈವ ಕುಟುಂಬಕಂ” ನ ಸಂದೇಶದಂತೆ ಅಪರಿಚಿತರನ್ನು ಆತ್ಮೀಯರನ್ನಾಗಿಸುತ್ತದೆ ಈ ಮಳೆನಡಿಗೆ.

Kanaada Yoga & Research Foundation ಒಂದು ದಿನದ ಈ ಪ್ರವಾಸದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲರೂ ಭಾಗವಹಿಸಬಹುದಾಗಿದ್ದು ಬೆಳಗಿನ ಕಾಫಿ,ಉಪಹಾರ,ಊಟ,ಸ್ನ್ಯಾಕ್ಸ್ , ರಾತ್ರಿ ಊಟ,ಮತ್ತು “ಉಚಿತ ಯೋಗ ಟಿ ಷರ್ಟ್” ಸೇರಿದಂತೆ ಶುಲ್ಕವನ್ನು₹1250/- ನಿಗದಿ ಪಡಿಸಿದ್ದು ಮೊದಲು ಜುಲೈ 17 ರ ಗುರುವಾರದೊಳಗಾಗಿ ನೊಂದಾಯಿಸುವ ಕೇವಲ 45 ಜನರಿಗೆ ಮಾತ್ರವೇ ಅವಕಾಶವಿರುತ್ತದೆ.

ಹೆಚ್ಚಿನ ವಿವರಗಳನ್ನು ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ (9886674375) ಮಂಜು ಕಾರ್ನಳ್ಳಿ (9916138314)
ಶ್ರೀಧರ್ ಅಯ್ಯರ್ (9480354389) ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...