Narayana Multispeciality Hospital ಕ್ಯಾನ್ಸರ್ ಸರ್ವೈವರ್ಸ ಗಳಿಗಾಗಿ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೆಡಿಕಲ್ ಅಂಕೂಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರು ಸರ್ವೈವರ್ ಕ್ಲಿನಿಕ್ ಆರಂಭಿಸಿದ್ದಾರೆ.
ಜುಲೈ ೧೭ ರಂದು ಈ ಕ್ಲಿನಿಕ್ ನಡೆಯುತ್ತದೆ, ಇದು ಪ್ರತಿ ತಿಂಗಳ 3ನೇ ಗುರುವಾರದಂದು ನಡೆಯುವ ಕ್ಲಿನಿಕ್ ಆಗಿದ್ದು ಕ್ಯಾನ್ಸರ್ ರೋಗಿಗಳ ಚೇತರಿಕೆ ಹಾಗೂ ಆರೈಕೆ ದೃಷ್ಟಿಯಿಂದ ಈ ಕ್ಲಿನಿಕ್ ಆರಂಭಿಸಲಾಗಿದೆ.
ಆರೋಗ್ಯಕರ ಜೀವನ, ಫಿಸಿಯೋಥೆರಪಿ ಮತ್ತು ಭಾವನಾತ್ಮಕ ಯೋಗಕ್ಷೇಮದಂತಹ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ತಜ್ಞರಿಂದ ಸಹ ಇಲ್ಲಿ ಮಾಹಿತಿ ನೀಡಲಾಗುತ್ತದೆ.
Narayana Multispeciality Hospital ಈ ತಿಂಗಳು ಎಂಡೋಕ್ರೈನಾಲೋಜಿಸ್ಟ್ ಡಾ. ಸುಜನ್ ಆರ್ ಮುದದೇವಣ್ಣನವರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅವರು ಕ್ಯಾನ್ಸರ್ ಚಿಕಿತ್ಸೆ ವೇಳೆ ಮಧುಮೇಹ ನಿರ್ವಹಣೆ: ಕ್ಯಾನ್ಸರ್ ಅನ್ನು ಗೆದ್ದವರು ಮತ್ತು ರೋಗಿಗಳು ಏನು ತಿಳಿಯಬೇಕು ಈ ಕುರಿತು ವಿಶೇಷ ಮಾಹಿತಿ ನೀಡಲಿದ್ದಾರೆ.
ದಿನಾಂಕ: 17 ಜುಲೈ 2025, ಗುರುವಾರ
ಸಮಯ ಮತ್ತು ಸ್ಥಳ: ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 | ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ. ಮಾಹಿತಿಗಾಗಿ
18003090309 ಸಂಪರ್ಕಿಸಿ ಅಥವಾ ಎನ್ ಎಚ್ ಕೇರ್ ಆಪ್ ಬಳಿಸಿ.
