Rotary Blood Bank ಶಿವಮೊಗ್ಗ ನಗರದ ಪ್ರತಿಷ್ಠಿತ ರೋಟರಿ ಸಂಸ್ಥೆಗಳಲ್ಲಿ ಒಂದಾದ ರೋಟರಿ ಮಿಡ್ ಟೌನ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ತಮ್ಮ ತಂಡದೊಂದಿಗೆ. ವಿನಾಯಕ ನಗರದಲ್ಲಿರುವ ರೋಟರಿ ರಕ್ತ ನಿಧಿ ಸಭಾಂಗಣ ದಲ್ಲಿ ನಿನ್ನೆ ರಾತ್ರಿ ರೋಟರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರ್ಷ ಬಿ. ಕಾಮತ್ ತಂಡಕ್ಕೆ ಅಂಬೆಗಾಲು ತಂಡದ ಅಧ್ಯಕ್ಷ ಹಾಗು ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಅವರು ಅಭಿನಂದಿಸಿ ಗೌರವಿಸಿದರು. ಅವರ ಅವಧಿಯಲ್ಲಿ ನಡೆಯುವ ಎಲ್ಲಾ ಸಮಾಜಮುಖಿ ಕಾರ್ಯಾಗಳಿಗೆ ಸಹಕರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್. ಬಿ ಎಂ ಭಟ್. ವಲಯ 10ರ ಸಹಾಯಕ ಗವರ್ನರ್ ಕೆಪಿ ಶೆಟ್ಟಿ ಮಾಜಿ ಸಹಾಯಕ ಗೌರ್ನರ್ ಜಿ. ವಿಜಯಕುಮಾರ್. ಎಸ್ ಆರ್ ನಾಗರಾಜ್. ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ. ಮಾಜಿ ಸಹಾಯಕ ಗೌರ್ನರ್ ಜಿ ವಿಜಯಕುಮಾರ್ ಉದ್ಯಮಿ ಹಾಲಪ್ಪನವರು ಮಾಜಿ ಅಧ್ಯಕ್ಷರಾದ ವೀರಣ್ಣ ಹುಗ್ಗಿ ವಲಯ ಸೇನಾನಿ ರಂಗರಾಜನ್. ಕಾರ್ಯದರ್ಶಿ ಆರ್‌ಎಂ ಮಂಜುನಾಥ್. ಅನ್ಸ್ ಕ್ಲಬ್ ಅಧ್ಯಕ್ಷರಾದ ಪವಿತ್ರ ಕಾಮತ್. ಕಾರ್ಯದರ್ಶಿ ಪ್ರೀತಿ ದೀಪಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Rotary Blood Bank ರೋಟರಿ ಮಿಡ್ ಟೌನ್ಅಧ್ಯಕ್ಷ ಹರ್ಷ ಬಿ.ಕಾಮತ್ ಅವರಿಗೆ ಎಲ್ಲ ರೀತಿಯ ಸಹಕಾರವಿದೆ- ಶಾಸಕ ಡಿ.ಎಸ್.ಅರುಣ್
Date:
