Sankara Eye Hospital ಭಗವಂತನ ಕೃಪೆಯಿಂದ ಎಲ್ಲಾ ಪ್ರಾಣಿಗಳಿಗೆ ಕಣ್ಣನ್ನು ನೀಡಿರುವುದರಿಂದ ಜಗತ್ತನ್ನು ನೊಡುವ ಹಾಗೂ ದೇಹದಲ್ಲಿ ಅತ್ಯಂತ ಹೆಚ್ಚಿನ ಮಹತ್ವ ಹೊಂದಿದ ಅಂಗವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಅಧ್ಯಕ್ಷರಾದ ರೊ.ಅಶ್ವಥ್ ಮತ್ತೂರಿನಲ್ಲಿ ಆಯೋಜಿಸಿದ್ದ ಕಣ್ಣಿನ ಪರೀಕ್ಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಂಕರ ಕಣ್ಣಿನ ಆಸ್ವತ್ರೆ ಸಹಯೋಗದಲ್ಲಿ ಈಗಾಗಲೆ ಇಪ್ಪತ್ತೆಂಟು ಶಿಬಿರಗಳನ್ನು ಏರ್ಪಡಿಸಿ, ಸಾವಿರಾರು ಗ್ರಾಮಾಂತರ ಪ್ರದೇಶದ ಬಡ ಕಾರ್ಮಿಕರಿಗೆ ಅನುಕೂಲವಾಗಿದೆ, ಇಲ್ಲಿನ ಸಿಬ್ಬಂದಿ ಅತ್ಯಂತ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಅವರ ಸಹಕಾರದಿಂದ ನಾವು ಉತ್ತೇಜಿತರಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಿದೆ ಎಂದರು.
ಶಂಕರಕಣ್ಣಿನ ಆಸ್ವತ್ರೆ ರವೀಂದ್ರ ಮಾತನಾಡಿ, ದೇಶಾದ್ಯಂತ ಇರುವ ಆಸ್ವತ್ರೆಗಳಲ್ಲಿ ವರ್ಷಕ್ಕೆ ಇಪ್ಪತ್ತಮೂರು ಸಾವಿರಕ್ಕಿಂತ ಹೆಚ್ಚಿನ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಈ ರೀತಿ ಸೇವಾ ಮನೀಭಾವವಿರುವ ಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿಯಾಗಿ ಶಿಬಿರಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.
Sankara Eye Hospital ಡಾ.ಕುಮಾರಿ ವೈಷ್ಣ, ಮಾತನಾಡಿ ಈಗ ಕಣ್ಣಿನ ಪೊರೆ ಬಂದಿರುವವರನ್ನು ಗುರ್ತಿಸಿ ಆಯ್ಕೆ ಮಾಡಲಾಗಿದೆ. ಅವರನ್ನು ಆಸ್ವತ್ರೆಗೆ ಕರೆದು ಕೊಂಡು ಹೀಗಿ ಆರೋಗ್ಯ ಪರೀಕ್ಷೆ ಮಾಡಿ ಯಾವಿದೇ ತ್ತೊಂದರೆ ಇಲ್ಲದಿದ್ದಲ್ಲಿ, ನಾಳೆಯೆ ಶಸ್ತ್ರಚಿಕಿತ್ಸೆ ಮಾಡಿಸಿ, ನಾಡಿದ್ದು ನಮ್ಮ ವಾಹದಲ್ಲೇ ಕರೆದು ಕೊಂಡು ಬಂದು ಇಲ್ಲಿಗೆ ಬಿಡುತ್ತೇವೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಡಾಕ್ಟರ್ ರಘುಪ್ರಸಾದ್ ಮಾತನಾಡಿ ಅನಾರೋಗ್ಯ ಇರುವವರಿಗೆ ಚಿಕಿತ್ಸೆ ಮಾಡಿ ಅವರು ಗುಣಮುಖರಾದ ನಂತರ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ನಿಮಗೆ ಗೊತ್ತಿರುವವರಿಗೂ ತಿಳಿಸಿ ಎಂದರು.
ಕಾರ್ಯದರ್ಶಿ ರೊ.ರೇವಣಸಿದ್ದಪ್ಪ ಸ್ವಾಗತಿಸಿ, ರೊ.ಲಕ್ಷ್ಮೀನಾರಾಯಣ್ ವಂದಿಸಿದರು, ರೊ.ವಾಗೇಶ್ ನಿರೂಪಿಸಿದರು
Sankara Eye Hospital ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಪಾಸಣೆ ಶಿಬಿರಗಳಿಂದ ಬಡಜನರಿಗೆ ಅನುಕೂಲವಾಗಿದೆ- ರೋ. ಅಶ್ವಥ್
Date:
