Saturday, December 6, 2025
Saturday, December 6, 2025

Food Civil Supplies and Consumer Affairs ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಸದಸ್ಯರು ಕ್ಷೇತ್ರದಲ್ಲಿ ಸಮರ್ಪಕವಾಗಿ ತಮ್ಮ ಕೆಲಸ ಮಾಡಬೇಕು ಆಹಾರ : ಕೆ.ಹೆಚ್. ಮುನಿಯಪ್ಪ

Date:

Food Civil Supplies and Consumer Affairs ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರ ನೇತೃತ್ವದಲ್ಲಿ ವಿಕಾಸ ಸೌಧದಲ್ಲಿ ರಾಜ್ಯ ಮಟ್ಟದ ಜಾಗೃತಿ ಸಭೆಯನ್ನು ನಡೆಸಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಕಾಯ್ದೆಯಡಿ ರಚಿಸಿರುವ – ಜಾಗೃತಿ ಸಮಿತಿ ಸಭೆಯ ಮಾಹಿತಿಗಳು

  • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ – 2013ರ ರಾಜ್ಯ ಸರ್ಕಾರವು ಸಂಖ್ಯೆ: ಎಫ್.ಸಿ.ಎಸ್ 144 ಡಿ.ಆರ್.ಎ 2013 ದಿ: 30.05.2016 ಕರ್ನಾಟಕ ಜಾಗೃತಿ ಸಮಿತಿ ನಿರ್ದಿಷ್ಟ ಗುರುಯುಳ್ಳ ಸಾರ್ವಜನಿಕ ವಿತರಣಾ ಪದ್ದತಿ ನಿಯಮ -2016ರ ಅಧಿಸೂಚನೆಯನ್ನು ಹೊರಡಿಸಿ ರಾಜ್ಯದಲ್ಲಿ ಕೆಳಕಂಡ ನಾಲ್ಕು ಹಂತಗಳ ಜಾಗೃತಿ ಸಮಿತಿಗಳನ್ನು ರಚಿಸಿ ನಿಯಮಾವಳಿಗಳನ್ನು ರೂಪಿಸಲಾಗಿದೆ.
  1. ರಾಜ್ಯ ಮಟ್ಟದ ಜಾಗೃತಿ ಸಮಿತಿ
  2. ಜಿಲ್ಲಾ ಮಟ್ಟದ ಜಾಗೃತಿ ಸಮಿತಿ
  3. ತಾಲ್ಲೂಕು ಮಟ್ಟದ ಜಾಗೃತಿ ಸಮಿತಿ 4. ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ.

ಇದರಂತೆ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕು ಹಂತಗಳಲ್ಲಿ ಜಾಗೃತಿ ಸಮಿತಿಗಳ ಅವಧಿಯು ಎರಡು ವರ್ಷಗಳಾಗಿದ್ದು ನ್ಯಾಯಬೆಲೆ ಅಂಗಡಿ ಹಂತದಲ್ಲಿ ನಿರಂತರವಾದ ಸಮಿತಿಯಾಗಿರುತ್ತದೆ.

Food Civil Supplies and Consumer Affairs ನ್ಯಾಯಬೆಲೆ ಅಂಗಡಿ ಹಂತದ ಸಮಿತಿಗಳು ಪ್ರತಿ ಮಾಹೆಯ 7ನೇ ದಿನಾಂಕದಂದು ಸಭೆಯನ್ನು ಹಾಗೂ ರಾಜ್ಯ ಜಿಲ್ಲಾ ತಾಲ್ಲೂಕು ಹಂತದ ಸಭೆಗಳು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾಗಿರುತ್ತದೆ.

  • ನ್ಯಾಯಬೆಲೆ ಅಂಗಡಿ ಹಂತದ ಜಾಗೃತ ಸಮಿತಿಗಳನ್ನು ಆಹಾರ ಇಲಾಖೆಯ ತಂತ್ರಾಂಶದಿಂದ ಒಟ್ಟಾರೆಯಾಗಿ ಮೂರು ಮಹಿಳಾ ಕುಟುಂಬದ ಮುಖ್ಯಸ್ಥರಾಗಿರುವ ಪಡಿತರ ಚೀಟಿಗಳಿಂದ ಆಯ್ಕೆ ಮಾಡಲಾಗಿರುತ್ತದೆ.
    • *ಸದರಿ ಆದೇಶದಂತೆ ಎಲ್ಲಾ ಹಂತದ ಅಂದರೆ 20483 ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿ ಚಾಲ್ತಿಯಲ್ಲಿ ಇರುತ್ತದೆ.
  • 236 ತಾಲ್ಲೂಕುಗಳಲ್ಲಿ 31 ಜಿಲ್ಲೆಗಳ ಅವಧಿ ಮುಗಿದಿದ್ದು, ಪುನರ್ ರಚಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿ ಇದೆ.
  • * ರಾಜ್ಯ ಮಟ್ಟದ ಜಾಗೃತಿ ಸಮಿತಿಯು ದಿ: 09.01.2025ರಂದು ಪುನರ್ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 31 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಿಂದ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಈ ಜಿಲ್ಲೆಗಳಾದ ಬಾಗಲಕೋಟೆ, ದಕ್ಷಿಣ ಕನ್ನಡ, ದಾವಣಗೆರೆ, ರಾಮನಗರ ಹಾಗೂ 85 ತಾಲ್ಲೂಕುಗಳಿಂದ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಎ.ಎಫ್.ಸಿ.ಎಸ್ 52ಡಿ.ಆರ್.ಎ 2012[5] ದಿ: 18.06.2016ರಲ್ಲಿ ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿಗಳ ಅಧಿಕಾರ ಮತ್ತು ಕಾರ್ಯ ಸೂಚಿಗಳನ್ನು ನೀಡಲಾಗಿರುತ್ತದೆ.
    ಸರ್ಕಾರದ ಆದೇಶ ಸಂಖ್ಯೆ: ಆನಾಸ/52 ಡಿ.ಆರ್.ಎ 2012 ಬೆಂಗಳೂರು ದಿ: 05.09.2013 ಡಿ.ಜಿ.ಆರ್.ಓ ಅಂತಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ / 93 ಡಿ.ಆರ್.ಎ 2023 ಬೆಂಗಳೂರು ದಿ: 09.01.2025 ಪ್ರಸ್ಥಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಜಾಗೃತ ಸಮಿತಿ ಉದ್ದೇಶಿತ ಸಾರ್ವಜನಿಕ ವಿತರಣಾ ಪದ್ದತಿ ನಿಯಮಗಳು 2016ರ ನಿಯಮ 7[4] ರನ್ವಯ ರಾಜ್ಯ ಮಟ್ಟದ ಜಾಗೃತಿ ಸಮಿತಿಗೆ ಈ ಕೆಳಕಂಡ ಸದಸ್ಯರನ್ನು ನೇಮಿಸಲಾಗಿದೆ.

ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರಾಗಿ
1 ಕೆ.ಹೆಚ್.ಮುನಿಯಪ್ಪ ಆ,ನಾಸ & ಗ್ರಾವ್ಯ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರು.

ಸದಸ್ಯರಾಗಿ
2 1. ತುಕಾರಾಂ, ಲೋಕಸಭಾ ಸದಸ್ಯರು ಅಶೋಕ ಕಾಲೋನಿ, ಸಂಡೂರು, ಬಳ್ಳಾರಿ ಜಿಲ್ಲೆ

  1. ಇಕ್ಬಾಲ್ ಹುಸೇನ್, ವಿಧಾನ ಸಭಾ ಸದಸ್ಯರು, ರಾಮನಗರ
  2. ಹರೀಶ್ ಗೌಡ, ವಿಧಾನ ಸಭಾ ಸದಸ್ಯರು, ಹುಣಸೂರು ಕ್ಷೇತ್ರ.
  3. ಬಸವನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರು, ಸಿಂದನೂರು, ರಾಯಚೂರು ಜಿಲ್ಲೆ.
    5 ಎಂ.ನಾರಾಯಣಸ್ವಾಮಿ, ಸದಸ್ಯರು
    6.ಭೀಮಣ್ಣ ಸದಸ್ಯರು ಯಾದಗಿರಿ
    7.ವಾಣಿ ಆರ್.ಸಗರ್ ಕರ್ ಕಲಬುರ್ಗಿ.
    8 ರೇವತಿ ಅನಂತರಾಮು ದೊಡ್ಡಬಳ್ಳಾಪುರ,
    9 ಮೋಹನ್ ಕುಮಾರ್ ದಾನಪ್ಪ.
    10.ವಿದ್ಯಾಲಿಬರೇಷನ್ ಕಲ್ಚರಲ್ ಆಕ್ಷನ್ ಪ್ಲಾಟ್ ಗುಲ್ಬರ್ಗ 3ಸದಸ್ಯ ಕಾರ್ಯದರ್ಶಿ
    ಸರ್ಕಾರದ ಕಾರ್ಯದರ್ಶಿ, ಆ,ನಾಸ & ಗ್ರಾ.ವ್ಯ ಇಲಾಖೆ ಸದಸ್ಯ ಕಾರ್ಯದರ್ಶಿ

4 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾ.ಪಂ.ರಾಜ್
ಸದಸ್ಯರು

5 ಸರ್ಕಾರದ ಕಾರ್ಯದರ್ಶಿ. ಸಹಕಾರ ಇಲಾಖೆ, ಸದಸ್ಯರು

6 ಅಧ್ಯಕ್ಷರು, ಕ.ರಾ.ಆಹಾರ ಆಯೋಗ, ಮೈಸೂರು ಬ್ಯಾಂಕ್ ವೃತ್ತ, ಕೆ.ಜಿ. ರಸ್ತೆ, ಬೆಂಗಳೂರು ಸದಸ್ಯರು

7 ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ಆ.ನಾ.ಸ.ನಿಗಮ, ವಸಂತನಗರ, ಬೆಂಗಳೂರು ಸದಸ್ಯರು

8 ಜಿಲ್ಲಾಧಿಕಾರಿಗಳು, ಬೆಂಗಳೂರು, ಮೈಸೂರು, ಬೆಳಗಾವಿ ಕಲಬುರ್ಗಿ ಸದಸ್ಯರು

9 ವಿದ್ಯಾ ಲಿಬರೇಷನ್ ಕಲ್ಚರಲ್ ಆಕ್ಷನ್, ಕೃಷ್ಣ ನಗರ ಗುಲ್ಬರ್ಗ ಸದಸ್ಯರು

ಈ ಮೇಲ್ಕಂಡ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ.

ಸಚಿವರು ಮಾತನಾಡಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಜಾಗೃತಿ ಸಭೆಯನ್ನು ನಡೆಸಿದ್ದು
ನಮ್ಮ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದು ಈ ಯೋಜನೆಯು ಬಡವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯ ಮಾಡುತ್ತಿದೆ
ರಾಜ್ಯ ಮಟ್ಟದ ಜಾಗೃತಿ ಸಮಿತಿ ರಚಿಸಿದ್ದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅವುಗಳ ಅನುಷ್ಠಾನವಾಗದ ಜಿಲ್ಲೆಗಳ ಪಟ್ಟಿ ನೀಡುವಂತೆ ಸೂಚಿಸಿದರು ಈಗಾಗಲೇ ರಚನೆಯಾಗಿರುವ ತಾಲೂಕು ಮಟ್ಟದ ಸಮಿತಿಗಳು ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸಬೇಕೆಂದರು.

ತಾವು ಜಾಗೃತಿ ಸಮಿತಿ ಸದಸ್ಯರಿದ್ದು ಕ್ಷೇತ್ರದ ಮಟ್ಟದಲ್ಲಿ ಹೆಚ್ಚಿನ ಕೆಲಸ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು

ಸರ್ಕಾರ ಬಡವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದು ಯೋಜನೆಯ ಅನುಷ್ಠಾನದಲ್ಲಿ ಜಾಗೃತಿ ಸಮಿತಿಯ ಸದಸ್ಯರು ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಗಮನದಲ್ಲಿಟ್ಟು, ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದರು

ಸರ್ಕಾರದ ಪ್ರಮುಖ ಯೋಜನೆಗಳ ಮಾಹಿತಿಗಳನ್ನು ನಾಗರಿಕರಿಗೆ ಮನವರಿಕೆ ಮಾಡುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದ್ದು

ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ತುಕಾರಾಂ, ವಿಧಾನ ಸಭಾ ಸದಸ್ಯರಾದ ಇಕ್ಬಾಲ್ ಹುಸೇನ್,ವಿಧಾನ ಪರಿಷತ್ತಿನ ಸದಸ್ಯರಾದ ಬಸವನಗೌಡ ಬಾದರ್ಲಿ, ಸದಸ್ಯರು ಹಾಗೂ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್,ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನಾ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...