Saturday, December 6, 2025
Saturday, December 6, 2025

Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಗುರುಪೂರ್ಣಿಮಾ ಆಯೋಜನೆ

Date:

Shivaganga Yoga Center ಸಂಪೂರ್ಣ ಪ್ರಪಂಚಕ್ಕೆ ಜ್ಞಾನದ ಧಾರೆ ಎರೆದಂತಹ ವ್ಯಾಸ ಮಹರ್ಷಿಗಳ ಜನುಮ ದಿನದಂದು ಅವರನ್ನು ಸ್ಮರಿಸಿ ಪೂಜಿಸುವ ಸಂಪ್ರದಾಯವನ್ನು ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಪ್ರತಿ ವರ್ಷವೂ ಆಚರಿಸಲಾಗುತ್ತಿದೆ.

ದಿನಾಂಕ 10 ಜುಲೈ 2025 ಗುರುವಾರ ಮುಂಜಾನೆ 6:00ಗೆ ಕಲ್ಲಹಳ್ಳಿ ವಿನೋಬನಗರ ದಲ್ಲಿರುವ ಯೋಗ ಕೇಂದ್ರದ ಸಭಾಂಗಣದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಗುವುದು.

ದಿವ್ಯ ಸಾನಿಧ್ಯವನ್ನು ಯೋಗ ಕೇಂದ್ರದ ಮಹಾ ಪೋಷಕರಾದ ಪೂಜ್ಯ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಾವಚನವನ್ನು ದಯಪಾಲಿಸಲಿದ್ದಾರೆ.

ಗುರುಪೂರ್ಣಿಮೆ ಆಚರಣೆ ವಿಶೇಷತೆ ಬಗ್ಗೆ ಡಾ. ಪದ್ಮನಾಭ ಅಡಿಗ ರವರು ತಿಳಿಸಿಕೊಡಲಿದ್ದಾರೆ. ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ
ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯರು , ಅಧ್ಯಕ್ಷರಾದ ಶ್ರೀ ಎಸ್.ರುದ್ರೇಗೌಡರು ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರು, ಪೋಷಕ ಸದಸ್ಯರು, ಯೋಗ ಶಿಕ್ಷಕರು ಮತ್ತು ಯೋಗ ಶಿಕ್ಷಣಾರ್ಥಿಗಳೆಲ್ಲರೂ ಸೇರಿ ವ್ಯಾಸ ಮಹರ್ಷಿಗಳನ್ನು ಸ್ಮರಿಸಿ ಪೂಜ್ಯ ಸ್ವಾಮೀಜಿಯವರಿಗೆ ಮತ್ತು ಗುರುಗಳಿಗೆ ನಮಿಸಿ ಆಶೀರ್ವಾದವನ್ನು ಪಡೆಯಲಿದ್ದಾರೆ.

Shivaganga Yoga Center ಪಿರಮಿಡ್ ಧ್ಯಾನ ಕೇಂದ್ರದೊಂದಿಗೆ ಆದಿಯೋಗಿ ಶಿವ , ಪತಂಜಲಿ ಮಹರ್ಷಿಯವರ ಶಿಲ್ಪಗಳನ್ನು ಪ್ರತಿಷ್ಠಾಪಿಸಿ ಫಲ ಪುಷ್ಪ ಔಷಧಿ ಗಿಡಗಳನ್ನು ಒಳಗೊಂಡ ಸುಂದರ ಹಸಿರು ಪರಿಸರದಲ್ಲಿ ಇರುವ ಯೋಗ ಕೇಂದ್ರದ ದರ್ಶನದಿಂದಲೇ ಧನ್ಯತಾ ಭಾವ ಮೂಡಿ ಬರುವುದು ಅಲ್ಲಿ ಅಭ್ಯಾಸಿಸುವ ಯೋಗ ಶಿಕ್ಷಣಾರ್ಥಿಗಳೆಲ್ಲರ ಅನುಭವ. ಇಲ್ಲಿ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಯೋಗಾಸಕ್ತರು, ಈ ಕೇಂದ್ರದಲ್ಲಿ ಯೋಗ ಅಭ್ಯಾಸ ಪಡೆದವರು ಮತ್ತು ಸಾರ್ವಜನಿಕರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡಬಹುದಾಗಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ
ಜಿ ವಿಜಯಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...