Sunday, August 2, 2026
Sunday, August 2, 2026

Agricultural University ಕೋಗಾರ್ ,ಸಿಗಂದೂರು, ಶರಾವತಿ ಹಿನ್ನೀರು ಪ್ರದೇಶಗಳಿಂದ ಶಿವಮೊಗ್ಗಕ್ಕೆ ಬಸ್ ಸಂಚಾರ ಬೇಕು

Date:

Agricultural University ಕೋಗಾರ್, ಸಿಗಂದೂರು ತುಮರಿ ಮತ್ತು ಆಸುಪಾಸಿನ ಹಳ್ಳಿಯವರು ಶರಾವತಿ ಹಿನ್ನೀರಿನವರು. ಜಿಲ್ಲಾ ಕೇಂದ್ರವಾದ ಶಿವಮೊಗ್ಗಕ್ಕೆ ನೇರ, ಖಾಸಗಿ ಅಥವಾ ಕೆ.ಎಸ್.ಆರ್.ಟಿ.ಸಿ.ಯ, ಬಸ್ ಸಂಪರ್ಕವಿಲ್ಲ. ಜಿಲ್ಲಾ ಕೇಂದ್ರವಾದ ಶಿವಮೊಗ್ಗಕ್ಕೆ ಬಂದು ಹೋಗಲು ಅನಿವಾರ್ಯವಾಗಿ ಹೊಸನಗರ ಅಥವಾ ಸಾಗರ ಮಾರ್ಗದ ಬಸ್‌ಗಳನ್ನು ಆಶ್ರಯಿಸಬೇಕಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕರು ಸುಮಾರು 25 ಕಿಲೋಮೀಟರ್ ದೂರವನ್ನು ಹೆಚ್ಚುವರಿಯಾಗಿ ಕ್ರಮಿಸಬೇಕು. ಹಾಗಾಗಿ ಈ ಮಾರ್ಗವು, ಸಮಯ ಹಾಗೂ ಹಣದ ದೃಷ್ಟಿಯಿಂದ, ಅವರುಗಳಿಗೆ ದುಬಾರಿಯಾಗಿರುವುದು. ಹಾಗೊಮ್ಮೆ, ಶಿವಮೊಗ್ಗ ದಿಂದ – ಆನಂದಪುರ – ಅಡೂರು – ಹೆಬೈಲು – ಹೆಗ್ಗೋಡು – ನಂದಿಗೋಡು – ಗೆಣಸಿನಕುಣಿ – ಹುಲಿದೇವರಬನ – ಹೊಳೆಬಾಗಿಲು – ಸಿಗಂದೂರು ಮಾರ್ಗವಾಗಿ – ಕೋಗಾರ್‌ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಂಪರ್ಕ ಕಲ್ಪಿಸಿದಲ್ಲಿ ಈ ಮಾರ್ಗಗಳ ನಡುವೆ ಇರುವ ಊರಿನವರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗಳಿಗೆ ಇಲ್ಲಿ ಓಡುವ ಬಸ್ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುವುದು. Agricultural University ಹಾಗೆಯೇ, ಆನಂದಪುರ ಹೋಬಳಿ ಕೇಂದ್ರ, ಕಿರುವಕ್ಕಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ಹಾಗೂ ಧಾರ್ಮಿಕ ಕೇಂದ್ರವಾದ ಸಿಗಂದೂರಿಗೆ ತಲುಪಲು ಬಹು ಸಮೀಪದ ದಾರಿಯಾಗಿ ಮಾರ್ಗದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಾರಣವಾಗುವುದು. ಆದುದರಿಂದ ಶಿವಮೊಗ್ಗ ದಿಂದ – ಆನಂದಪುರ – ಅಡೂರು – ಹೆಬೈಲು- ಹೆಗ್ಗೋಡು – ನಂದಿಗೋಡು – ಗೆಣಸಿನಕುಣಿ – ಹುಲಿದೇವರಬನ – ಹೊಳೆಬಾಗಿಲು – ಸಿಗಂದೂರು ಮಾರ್ಗವಾಗಿ – ಕೋಗಾರ್‌ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಂಪರ್ಕವನ್ನು, ಬೆಳಿಗ್ಗೆ 08:00, 11:00 ಮತ್ತು ಸಂಜೆ 16:00 ಗಂಟೆಗೆ ಏಕಕಾಲದಲ್ಲಿ ಎರಡೂ ಕಡೆಗಳಿಂದ, ಕಲ್ಪಿಸಲು ತ್ವರಿತವಾಗಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಮ್ರ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...