Diksoochi Adventure ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್ ವತಿಯಿಂದ ಜುಲೈ 11ರಿಂದ 13ರವರೆಗೆ ಮಡಿಕೇರಿಯ ಪ್ರಸಿದ್ಧ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿದೆ.
ಶಿವಮೊಗ್ಗದಿಂದ ಜುಲೈ 11ರ ರಾತ್ರಿ 11.45ಕ್ಕೆ ಪ್ರವಾಸ ಆರಂಭಗೊಳ್ಳಲಿದೆ. ಎರಡನೇ ದಿನ ಜುಲೈ 12ರಂದು ಬೆಳಗ್ಗೆ ಮಡಿಕೇರಿ ತಲುಪುವುದು ನಂತರ ಟ್ರೆಕ್ ಬೇಸ್ ಆಗಿರುವ ನಾಲಕ್ನಾಡ್ ಪ್ಯಾಲೇಸ್ ತಲುಪಿದ ನಂತರ ತಡಿಯಂಡಮೋಳ್ ಬೆಟ್ಟದ ಚಾರಣ ಆರಂಭಗೊಳ್ಳಲಿದೆ. ಎತ್ತರದ ಸ್ಥಳಕ್ಕೆ ತಲುಪಿದ ಬಳಿಕ ಊಟದ ವ್ಯವಸ್ಥೆ ಇರಲಿದೆ.
Diksoochi Adventure ಮಧ್ಯಾಹ್ನದ ನಂತರ ಚೆಕ್‌ಪೋಸ್ಟ್ ಸ್ಥಳಕ್ಕೆ ಹಿಂದಿರುಗುವುದು. ವಾಸ್ತವ್ಯದ ಜಾಗ ತಲುಪಿದ ಬಳಿಕೆ ಕೂರ್ಗ್ ಶೈಲಿಯ ರಾತ್ರಿ ಊಟದ ವ್ಯವಸ್ಥೆ ಹಾಗೂ ಕ್ಯಾಂಪ್ ಫೈರ್ ಇರಲಿದೆ. ಜುಲೈ 13ರಂದು ಬೆಳಗ್ಗೆ ಉಪಹಾರ ಸೇವನೆ ಬಳಿಕ ಮಡಿಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುವುದು. ನಮ್ಡ್ರೋಲಿಂಗ್ ಮೋನಾಸ್ಟರಿಗೆ ಭೇಟಿ ನೀಡುವುದು. ನಂತರ ಶಿವಮೊಗ್ಗಕ್ಕೆ ರಾತ್ರಿ 10ರೊಳಗೆ ಹಿಂದಿರುಗುವುದು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗೆ 8277314779 ಸಂಪರ್ಕಿಸಬಹುದಾಗಿದೆ.
Diksoochi Adventure ಮಡಿಕೇರಿಯ ತಡಿಯಂಡಮೊಳ್ ಬೆಟ್ಟಕ್ಕೆ ಜುಲೈ 11ರಿಂದ ಚಾರಣ, ಆಸಕ್ತರಿಗೆ ಆಹ್ವಾನ ಮಾಹಿತಿ
Date:
