Karnataka State Powerlifting Association ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್‌ನಿಂದ ಬೆಂಗಳೂರಿನಲ್ಲಿ ನಡೆಸಿದ ಎಪಿಎಲ್ ಚಾಂಪಿಯನ್ ಶಿಪ್ ಸ್ಪರ್ಧೆಯ 93ಕೆ.ಜಿ. ವಿಭಾಗದಲ್ಲಿ ಶಿವಮೊಗ್ಗ ನಗರದ ಲಕ್ಷ್ಮೀ ಗೆಲಾಕ್ಸಿಯಲ್ಲಿರುವ ಫಿಟ್ ಕೇರ್‌ನ ಜಗದೀಶ್ ಜಿ.ಸಿ. ಪ್ರಥಮ ಸ್ಥಾನ ಮತ್ತು 60ರಿಂದ 70ಕೆ.ಜಿ. ವಿಭಾಗದಲ್ಲಿ ನಯನ ಜೆ. ಅವರು ಪ್ರಥಮ ಸ್ಥಾನದೊಂದಿಗೆ ಪದಕ ಪಡೆದು ಛಾಂಪಿಯನ್ ಆಗಿದ್ದಾರೆ.
ಶಿವಮೊಗ್ಗದಲ್ಲಿ ಕಳೆದ 30ವರ್ಷಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್‌ನಲ್ಲಿ 1ಪದಕ, ರಾಷ್ಟ್ರ ಮಟ್ಟದಲ್ಲಿ 12ಪದಕ ರಾಜ್ಯಮಟ್ಟದಲ್ಲಿ 25ಪದಕ ಪಡೆದು ಸಾಧನೆ ಮಾಡಿರುವ ಜಗದೀಶ್ ಅವರು, ನಗರದಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದಾರೆ. ಸಾಧನೆಗೆ ಗುರಿ ಮುಖ್ಯ, ಯಾವ ಕೆಲಸವಾದರೇನು ಗುರಿ ಸಾಧನೆಗೆ ಶ್ರದ್ಧೇ ಮತ್ತು ನಿಷ್ಠೆ ಇರಬೇಕೆಂದು ಅವರು ಹೇಳಿದ್ದಾರೆ.
Karnataka State Powerlifting Association ವಿಶೇಷವೆಂದರೆ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತಂದಿರುವ ಛಾಂಪಿಯನ್ ಶಿಪ್ ಪಡೆದ ನಯನ ಜೆ. ಅವರು. ಚಾಂಪಿಯನ್ ಜಗದೀಶ್ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿಯಾಗಿದ್ದಾರೆ.
