Friends Centre ಭಾರತದಲ್ಲಿ ಸ್ತನ ಕ್ಯಾನ್ಸರ್ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ. ಪ್ರಸ್ತುತ ಭಾರತೀಯ ಮಹಿಳೆಯರಲ್ಲಿ ಅತಿಯಾದ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ ಎಂದು ಕ್ಯಾನ್ಸರ್ ತಜ್ಞೆ ಡಾ. ಸ್ವಾತಿ ಹೇಳಿದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ಹಾಗೂ ಫ್ರೆಂಡ್ ಸೆಂಟರ್, ನೇತ್ರ ಹಾಗೂ ರಕ್ತ ಭಂಡಾರದ ವತಿಯಿಂದ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ನಗರದ ಪ್ರದೇಶಗಳಲ್ಲಿ 29 ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಅಂದಾಜಿದೆ ಎಂದು ತಿಳಿಸಿದರು.
40 ವರ್ಷ ಮೇಲ್ಪಟ್ಟವರು, ಕುಟುಂಬದಲ್ಲೇ ಇತರರಿಗೆ ಕಾನ್ಸರ್ ಇರುವುದು, ಮುಂಚಿತ ಋತುಸ್ರಾವ ಪ್ರಾರಂಭ, ತಡವಾಗಿ ಗರ್ಭಧಾರಣೆ ಅಥವಾ ಗರ್ಭಧಾರಣೆಯಿಲ್ಲದಿರುವುದು, ತಾಯಿ ಹಾಲು ನೀಡದಿರುವುದು, ಹಾರ್ಮೋನಲ್ ಔಷಧಿ ಸೇವನೆ, ಹೆಚ್ಚು ಕೊಬ್ಬು ತಿನ್ನುವುದು ಮತ್ತು ಅನಿಯಮಿತ ಜೀವನಶೈಲಿ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.
Friends Centre ಸ್ತನ ಕ್ಯಾನ್ಸರ್ ಅನ್ನು ತಡವಾಗಿ ಪತ್ತೆಹಚ್ಚಿದರೆ ಚಿಕಿತ್ಸೆ ಕಠಿಣವಾಗಬಹುದು. ಆದ್ದರಿಂದ ಪ್ರತಿ ಮಹಿಳೆ ತಿಂಗಳಲ್ಲಿ ಒಮ್ಮೆ ಸ್ವಯಂ ಸ್ತನ ತಪಾಸಣೆ ಮಾಡುವುದು ಬಹುಮುಖ್ಯ. ಗಡ್ಡೆ ಅಥವಾ ಬದಲಾವಣೆಗಳ ಪತ್ತೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಮುಂಚಿತವಾಗಿ ಪತ್ತೆ ಹಚ್ಚಿದರೆ ಚಿಕಿತ್ಸೆ ಫಲಕಾರಿಯಾಗಬಹುದು ಮತ್ತು ಜೀವಿತಾವಧಿ ಹೆಚ್ಚಬಹುದು ಎಂದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಪ್ನ ಬದ್ರಿನಾಥ್, ಕಾರ್ಯದರ್ಶಿ ಸ್ಮಿತಾ ನವೀನ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್, ನೇತ್ರ ಭಂಡಾರದ ಅಧ್ಯಕ್ಷ ವಿ.ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ಭಾಗ್ಯವತಿ, ಡಾ. ಮನೀಷಾ, ಡಾ. ಸುಷ್ಮಿತಾ, ಡಾ. ವಿದ್ಯಾಶ್ರೀ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಸುನಿತಾ, ವೀಣಾ, ಸುಷ್ಮಾ, ಭಾಗ್ಯ ಭಟ್, ಭಾಗ್ಯ ವಿಜಯೇಂದ್ರ, ಸಂಧ್ಯಾ, ಬರ್ಕ ಮುಲಾನಿ, ಶ್ರೀನಿವಾಸ್ ಹಾಗೂ ಫ್ರೆಂಡ್ ಸೆಂಟರ್ ಸದಸ್ಯರು ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
Friends Centre ಸ್ತನ ಕ್ಯಾನ್ಸರ್ ಗೆ ಬದಲಾಗಿರುವ ಅನಿಯಮಿತ ಜೀವನ ಶೈಲಿಯೂ ಪ್ರಮುಖ ಕಾರಣ- ಡಾ.ಸ್ವಾತಿ
Date:
