Inner Wheel Shivamogga ಪ್ರತಿದಿನ ನಮ್ಮ ಒತ್ತಡದ ಬದುಕಿನಲ್ಲಿ ಜಂಜಾಟದಲ್ಲಿ ಬಳಲುತ್ತಿರುವಾಗ ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಸಿಗುವುದು ವೈದ್ಯರಲ್ಲಿ ಮಾತ್ರ ವೈದ್ಯರ ಒಂದು ಆತ್ಮವಿಶ್ವಾಸದ ನುಡಿ ನಮ್ಮ ಜೀವವನ್ನು ಉಳಿಸುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಲತಾ ರಮೇಶ ಅವರು ನುಡಿದರು.
ಅವರು ಮ್ಯಾಕ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಇನ್ನರ್ ವೀಲ್ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪ್ರಖ್ಯಾತ ವೈದ್ಯರುಗಳಾದ ಡಾಕ್ಟರ್ ನಾರಾಯಣ ಪಂಜಿ. ಹೃದ್ರೋಗ ತಜ್ಞರಾದ ಡಾಕ್ಟರ್ ಸುಧೀರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಶತಮಾನಗಳಿಂದಲೂ ಸಹ ವೈದ್ಯೋ ನಾರಾಯಣ ಹರಿ ಎನ್ನುವ ನಾಣ್ನುಡಿಯಂತೆ ಅವರ ಸೇವೆ ಅನನ್ಯವಾಗಿದೆ ಅವರನ್ನು ಅವರ ಸೇವೆಯನ್ನು ಗೌರವಿಸೋಣ ವೈದ್ಯರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎಂದು ನುಡಿದರು.
ಸನ್ಮಾನ ಸ್ವೀಕರಿಸಿದ ವೈದ್ಯರುಗಳು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು ನಮ್ಮ ಆರೋಗ್ಯವನ್ನು ನಾವು ಸದಾ ಸದೃಢವಾಗಿ ಇಟ್ಟುಕೊಳ್ಳಲು ಉತ್ತಮವಾದ ಆರೋಗ್ಯ ಶೈಲಿ ಜೀವನ ಶೈಲಿ ಆಹಾರ ಪದ್ಧತಿಗಳು ಹಾಗೂ ಒತ್ತಡದಿಂದ ದೂರವಿರಬೇಕು ಹಾಗೂ ನಿರಂತರವಾಗಿ ನಮಗಾಗಿ ಪ್ರತಿನಿತ್ಯ 45 ನಿಮಿಷಗಳ ಕಾಲ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ದೈಹಿಕ ಶ್ರಮ ಮಾಡಲೇಬೇಕು ಎಂದು ನುಡಿದರು.
Inner Wheel Shivamogga ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಅಂಕಣಕಾರರಾದ
ಶ್ರೀ ರಂಜಿನಿ ದತ್ತಾತ್ರಿ. ಯಶೋಧ ಶೇಖರ್. ಸುಧಾ ಹೆಗಡೆ. ಜ್ಯೋತಿ ಪವಾರ್. ಶೃತಿ ರಾಕೇಶ್ ಹಾಗೂ ಇನ್ನರ್ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
