District Industrial Centre ಕೌಶಲ್ಯ ಆಯ್ಕೆ ಮಾಡಿಕೊಂಡು ಕಲಿತು ಸದ್ವಿನಿಯೋಗ ಮಾಡಿಕೊಳ್ಳಿ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ಶ್ರೀ ಸುರೇಶ್ ನುಡಿದರು. ಅವರು ಶಿವಮೊಗ್ಗ ಜಿಲ್ಲೆಯ ಮತ್ತೋಡು ಗ್ರಾಮದಲ್ಲಿ ಸ್ವೇದ ಮಹಿಳಾ ಉದ್ಯಮಿಗಳ ಸಂಘ ಆಯೋಜಿಸಿದ್ದ ಗ್ರಾಮೀಣ ಆರ್ಥಿಕ ಹಾಗೂ ಕೌಶಲ್ಯ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೌಶಲ್ಯ ಕಲಿತು ಬ್ಯಾಂಕ್ ಗಳಲ್ಲಿ ಮಹಿಳೆಯರಿಗಾಗಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ಪಾದನೆ ಮಾಡಲು ಅವರು ಕರೆ ನೀಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಕಾರ ಪಡೆದುಕೊಳ್ಳಬೇಕೆಂದು ನುಡಿದರು.
ಜಿಲ್ಲಾ ಕೌಶಲ್ಯಾಧಿಕಾರಿ ಶ್ರೀ ಹೆಚ್. ಎಂ ಸುರೇಶ್ ಮಾತ್ಕ್ನಾಡಿ ವಿವಿಧ ಎಡೆಗಳಲ್ಲಿ ದೊರೆಯುವ ಕೌಶಲ್ಯ ತರಬೇತಿಗಳನ್ನು ವಿವರಿಸಿದರು. ಕೌಶಲ್ಯ ಕಲಿತು ಉದ್ಯಮಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ನುಡಿದರು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ವ್ಯವಸ್ಥಾಪಕಿ ಶ್ರೀಮತಿ ಶಾಲಿನಿ ಮಾತನಾಡಿ ಇಂದು ಮಹಿಳೆಯರಿಗಾಗಿ ಬ್ಯಾಂಕ್ ಗಳಲ್ಲಿ ಹಲವಾರು ಯೋಜನೆಗಳು ಲಭ್ಯವಿದೆ ಎಂದು ವಿವರಗಳನ್ನು ನೀಡಿದರು. ಅದಲ್ಲದೆ ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲು ಮುಂತಾದ ವ್ಯವಸ್ಥೆಗಳಿದ್ದು, ಗುಂಪುಗಳಿಗಾಗಿ ಇರುವ ಸಾಲ ಸೌಲಭ್ಯಗಳು ಹಾಗೂ ಸಾಲ ದೊರೆಯದಿದ್ದರೆ ಪ್ರಶ್ನಿಸುವ ವಿವರ ಪಡೆಯುವ ವಿಧಾನವನ್ನು ವಿವರಿಸಿದರು .
District Industrial Centre ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ. ವಿ. ಲಕ್ಷ್ಮಿದೇವಿ ಗೋಪಿನಾಥ್ ಮಾತನಾಡಿ ಸಂಫವು ಆಯೋಜಿಸುವ ತರಬೇತಿಗಳಲ್ಲಿ ಭಾಗವಹಿಸಿ ಉದ್ಯಮವನ್ನು ಆರಂಭಿಸಿ ಮುನ್ನೆಡೆಸಬೇಕೆಂದು ನುಡಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ಮುಖ್ಯ ವ್ಯವಸ್ಥಾಪಕರಾದ ಶ್ರೀ ಸಂಜಯ್ ಸಿಂಗ್, ಶ್ರೀಮತಿ ನಂದಿನಿ, ಶ್ರೀಮತಿ ಸುಧಾ, ಶ್ರೀಮತಿ ಶ್ರುತಿ ಉಪಸ್ಥಿರರಿದ್ದರು.
District Industrial Centre ಕೌಶಲ್ಯ ಕಲಿತ ಮಹಿಳೆಯರು ಬ್ಯಾಂಕ್ ಗಳ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ- ಸುರೇಶ್
Date:
