Bhadravati Police ಆನಂದ ಕುಮಾರ್, 61 ವರ್ಷ, ಜಿಂಕ್‌ಲೈನ್, ಹೊಸಸಿದ್ದಾಪುರ, ಭದ್ರಾವತಿ ಇವರು ಏ.06 ರಂದು ಭದ್ರಾವತಿಯ ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ.
ಕಾಣೆಯಾದ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಕಾಣೆಯಾದ ವೇಳೆ ಕೆಂಪು ಬಿಳಿ ಮಿಶ್ರ ಬಣ್ಣದ ಗೆರೆಗಳಿರುವ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಬಲ ಕೆನ್ನೆಯ ಮೇಲೆ ಒಂದು ಕಪ್ಪು ಬಣ್ಣದ ಮಚ್ಚೆ ಇದ್ದು, ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. Bhadravati Police ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282-274313, 08282 266549, 08282 266252 ಅಥವಾ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.
Bhadravati Police ಭದ್ರಾವತಿಯಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ
Date:
