ISRO ಮಾನವ ಸಹಿತ ಗಗನಯಾನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂದಿನ ದೊಡ್ಡ ಯೋಜನೆಯಾಗಿದೆ ಎಂದು ವಿಜ್ಞಾಣಿ ಶಿವಾನಿ ಕೋಣಂದೂರು ಹೇಳಿದರು.
ಇಸ್ರೋ ಸಂಸ್ಥೆಗೆ ಭೇಟಿ ನೀಡಿದ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಇಸ್ರೋ ಪಾತ್ರ ತುಂಬಾ ಮಹತ್ತರವಾಗಿದೆ. ದೇಶದ ಸಂಪರ್ಕ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಇಸ್ರೋ ಪಾತ್ರ ತುಂಬಾ ಪ್ರಮುಖವಾಗಿದೆ. ಈಗಾಗಲೇ ನಮ್ಮ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ವಿಜ್ಞಾನಿ ಶಿವಶಂಕರ್ ಅವರು ಇಸ್ರೋ ಸಂಸ್ಥೆ ಸ್ಥಾಪನೆಯಾದ ವೇಳೆಯಿಂದ ಈವರೆಗೂ ಸಾಗಿಬಂದ ದಾರಿ, ಅದರ ಬೆಳವಣಿಗೆ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆ ಇಸ್ರೋಗೆ ಭೇಟಿ ನೀಡಿರುವುದು ತುಂಬಾ ಸಂತಸ ತಂದಿದೆ. ಇದರ ಕಾರ್ಯವೈಖರಿ ನಮಗೆ ತುಂಬಾ ಆಶ್ಚರ್ಯ ಮೂಡಿಸಿದೆ. ನಿಜಕ್ಕೂ ನಮ್ಮ ದೇಶದ ISRO ಪ್ರಗತಿಗೆ ಇಸ್ರೋ ವಿಜ್ಞಾನಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ನಮ್ಮ ದೇಶದ ವಿಜ್ಞಾನಿಗಳಿಗೆ ನಾವು ಸದಾ ಚಿರಋಣಿಯಾಗಿರಬೇಕು ಎಂದು ನುಡಿದರು.
ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಿವಶಂಕರ್, ಮಹಾದೇವ್ ಸ್ವಾಮಿ ಮತ್ತು ಡಾ. ಅನಿಲ್ ಕುಮಾರ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯಕುಮಾರ್, ಲತಾ ಸೋಮಣ್ಣ, ರಾಜೇಶ್ವರಿ ಪ್ರತಾಪ್, ವೀಣಾ ಹರ್ಷ, ವೀಣಾ ಸುರೇಶ್, ಹಾಗೂ ಇನ್ನರ್‌ವ್ಹೀಲ್ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.
ISRO ನಮ್ಮದು ಬಾಹ್ಯಾಕಾಶ ಕ್ಷೇತ್ರ ವಿಜ್ಞಾನದಲ್ಲಿ ಸಾಧನೆ ಮಾಡಿದ ಪ್ರಮುಖ ರಾಷ್ಟ್ರ- ಶಿವಾನಿ ಕೋಣಂದೂರು
Date:
