Friends Center Shivamogga ಬದುಕಿನ ಒತ್ತಡಗಳ ನಡುವೆ ಪ್ರವಾಸ, ಚಾರಣಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನೋತ್ಸಾಹ ವೃದ್ಧಿಯಾಗುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಮಳೆಗಾಲದ ಪ್ರವಾಸ ಹಾಗೂ ಚಾರಣಗಳನ್ನು ಉದ್ದೇಶಿಸಿ ಮಾತನಾಡಿ, ಪ್ರವಾಸದಿಂದ ಪರಸ್ಪರರಲ್ಲಿ ಒಡನಾಟ ಹಾಗೂ ಪರಿಚಯವಾಗುವ ಜತೆಗೆ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಹೊಸ ಹೊಸ ಸ್ಥಳಗಳ ಪರಿಚಯವಾಗುತ್ತದೆ. ಅಲ್ಲಿಯ ಜನರ ಜೀವನ ಬದುಕು ತಿಳಿಯುತ್ತದೆ. ಆದ್ದರಿಂದ ವರ್ಷದಲ್ಲಿ ಒಂದು ಎರಡು ಬಾರಿ ಪ್ರವಾಸ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ವಿಶೇಷ ಅನುಭವವನ್ನು ನೀಡುವಂತಹ ಸ್ಥಳಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಇವೆ. ಅವುಗಳನ್ನು ಭೇಟಿ ಮಾಡಿ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಳ್ಳಬೇಕು ಎಂದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪ್ರವಾಸ ಹಾಗೂ ಚಾರಣದಿಂದ ದೇಹ ಹಾಗೂ ಮನಸ್ಸು ಸದೃಢವಾಗಿರುತ್ತದೆ. ಮಳೆಗಾಲದಲ್ಲಿ ಪ್ರಕೃತಿ ಮಾತೆಯನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಪ್ರಕೃತಿಯನ್ನು ನಾವು ಪ್ರೀತಿಸಿ ಗೌರವಿಸಿ ಸಂರಕ್ಷಿಸಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜತೆಗೆ ಪ್ರವಾಸಿಗರಿಗೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಇಲಾಖೆ ವತಿಯಿಂದ ಮಾಡಬೇಕು ಎಂದು ನುಡಿದರು.
Friends Center Shivamogga ಫ್ರೆಂಡ್ಸ್ ಸೆಂಟರ್ ಚೇರ್ಮನ್ ವಿ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ 84 ಪ್ರಸಿದ್ಧ ಪ್ರವಾಸಿ ತಾಣಗಳು ಇವೆ. ಪ್ರವಾಸೋದ್ಯಮ ಬೆಳೆಯಬೇಕಾದರೆ ಸಾರ್ವಜನಿಕರ ಸಹಕಾರವು ಅಷ್ಟೇ ಮುಖ್ಯವಾಗಿರುತ್ತದೆ. ಅವರಿಗೆ ಸೂಕ್ತ ಹಾಗೂ ಮೂಲ ವ್ಯವಸ್ಥೆಗಳ ಅವಶ್ಯಕತೆ ಇರುತ್ತದೆ. ಪ್ರವಾಸೋದ್ಯಮ ಇಲಾಖೆ ಸಹಕರಿಸಬೇಕಾಗಿದೆ ಎಂದು ಹೇಳಿದರು.
ಮೃಘವಧೆ, ಹರಿಹರಪುರ, ಕುಪ್ಪಳ್ಳಿ, ಶಕಟಾಪುರ, ಶೃಂಗೇರಿ ಹಾಗೂ ಮುಂತಾದ ದಳಗಳಿಗೆ ಏರ್ಪಡಿದ್ದ ಪ್ರವಾಸದಲ್ಲಿ ಫ್ರೆಂಡ್ಸ್ ಸೆಂಟರ್ ಸದಸ್ಯರು ಪಾಲ್ಗೊಂಡು ಪ್ರವಾಸಿ ತಾಣಗಳನ್ನು ಭೇಟಿ ನೀಡಿ ಸಂಭ್ರಮಿಸಿದರು. ಶೃಂಗೇರಿ ಹಾಗೂ ಹರಿಹರಪುರದಲ್ಲಿ ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಿದರು.
ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಚೇರ್ಮನ್ ವಿ.ನಾಗರಾಜ್, ಮಾಜಿ ಅಧ್ಯಕ್ಷ ಸತ್ಯನಾರಾಯಣ್ ಮಹೇಶ್ವರಪ್ಪ, ರಮೇಶ್, ಸುರೇಶ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ಎಲ್ ಎಂ ಮೋಹನ್, ಯು ರವೀಂದ್ರನಾಥ್ ಐತಾಳ್, ಎಮ್ ಶಂಕರ್ ಹಿರೇಮಠ್, ದ್ವಾರಕನಾಥ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Friends Center Shivamogga ಚಾರಣಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನೋತ್ಸಾಹ ವೃದ್ಧಿ
Date:
