Pinnacle Data Services ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆಯ ಸಿಎಸ್‌ಆರ್ ಸಮಿತಿಯಿಂದ ಶಿವಮೊಗ್ಗದಲ್ಲಿ ಹಸಿರು ಅಭಿಯಾನ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಸಿಗಳನ್ನು ನೆಡುವ ಜತೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಯಿತು.
ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆಯು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಸಮಿತಿಯು ಪರಿಸರ ಸಂರಕ್ಷಣೆಯತ್ತ ಮತ್ತು ಸಮಾಜದ ಕಲ್ಯಾಣದತ್ತ ಒತ್ತು ನೀಡುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಹುಲಿ ಮತ್ತು ಸಿಂಹಧಾಮ ಉದ್ಯಾನವನದಲ್ಲಿ ಹಮ್ಮಿಕೊಂಡ ಹಸಿರು ಅಭಿಯಾನದಲ್ಲಿ 102 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆ ನಿರ್ದೇಶಕರಾದ ರವಿಕುಮಾರ್ ಎನ್.ಎಸ್., ರೋಹಿತ್, ಬಾಲಕೃಷ್ಣ ನಾಯಕ್ ಮತ್ತು ಆರಾಧನಾ ಆಸ್ಪತ್ರೆಯ ವೈದ್ಯೆ ಡಾ. ಶೋಭಾ ಎಂ.ಎಂ. ನೇತೃತ್ವ ವಹಿಸಿದ್ದರು. ಸಂಸ್ಥೆಯ ನೌಕರರು ಮತ್ತು ಸ್ಥಳೀಯ ಪರಿಸರ ಸಂರಕ್ಷಕರು ಸಹಭಾಗಿಯಾಗಿ ಹಸಿರೀಕರಣ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
Pinnacle Data Services ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ತಂಡವು ಶಿವಮೊಗ್ಗದ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಪುಸ್ತಕಗಳು ಮತ್ತು ಹುಡೀಸ್‌ಗಳನ್ನು ವಿತರಿಸಿತು. ಸಮಾನತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಸಾರ್ವಜನಿಕರಲ್ಲಿ ಹರಡುವ ಉದ್ದೇಶ ಇಡಲಾಗಿದೆ.
ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮಗಳು ಸ್ಥಳೀಯ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಪಿನಾಕಲ್ ಸಂಸ್ಥೆಯ ಸಮಾಜಮುಖಿ ದೃಷ್ಟಿಕೋನವನ್ನು ಕಾರ್ಯಕ್ರಮಗಳು ಮತ್ತಷ್ಟು ಬಿಂಬಿಸಿದವು.
Pinnacle Data Services ಪಿನಾಕಲ್‌ನಿಂದ ಪರಿಸರ ಜಾಗೃತಿ, ಸಾಮಾಜಿಕ ಸೇವೆ ಕಾರ್ಯಕ್ರಮ
Date:
