Youth Hostels Association ವರ್ಷದಲ್ಲಿ ಪ್ರತೀದಿನ ಹವಾಗುಣ ಬದಲಾಗುತ್ತಿರುತ್ತದೆ, ಅದಕ್ಕೆ ಸ್ವಂದಿಸಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು. ಆಗ ಜೀವನದ ಸಾರ್ಥಕತೆ ಎಂದು ತರುಣೋದಯ ಘಟಕ ಏರ್ಪಡಿಸಿದ್ದ ಭೀಮೇಶ್ವರ ಮಳೆಗಾಲದ ಚಾರಣಕ್ಕೆ ಚಾಲನೆ ನೀಡಿದ ಛೇರ್ಮನ್ ವಾಗೇಶ್ ನುಡಿದರು.
ಯೂತ್ ಹಾಸ್ಟೆಲ್ಸ್ ವತಿಯಿಂದ ಅತ್ಯಂತ ಜಾಗೂಕತೆಯಿಂದ, ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಎಲ್ಲಾ ವಯೋಮಾನದವರು ಭಾಗವಹಿಸಿ ಆನಂದ, ಸಂತೋಷ ಅನುಭವಿಸಬಹುದಾಗಿದೆ ಎಂದರು.
Youth Hostels Association ಈಗ ಮಳೆಗಾಲ, ಅದನ್ನು ಅನುಭವಿಸಲು ಪ್ರತಿ ವರ್ಷ ಅತೀ ಹೆಚ್ಚು ಮಳೆ ಬೀಳುವ ಸ್ಥಳಗಳಿಗೆ ಒಂದು ದಿನದ ಚಾರಣ ಏರ್ಪಡಿಸಿ ಅದರ ಸವಿ ಸವಿಯಲು ಎಲ್ಲಾ ವಯೋಮಾನದವರಿಗೂ ಅವಕಾಶ ನೀಡುತ್ತಾಬಂದಿದ್ದೇವೆ. ಇಂದು ಸಹ ಮೂರು ವರ್ಷದ ಮಗುವಿನಿಂದ ಎಂಬತ್ತು ವರ್ಷದ ವಯೋಮಾನದವರು ಭಾಗವಹಿಸಿದ್ದಾರೆ ಎಂದು ಕಾರ್ಯದರ್ಶಿ ಸುರೇಶ್ ಕುಮಾರ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಘಟಕದ ಸಂಸ್ಥಪಕರಾದ ವೇಣುಗೋಪಾಲ್, ಉಮೇಶ್ ನೀರ್ದೆಶಕರಾದ ಮಲ್ಲಿಕಾರ್ಜುನ್ ಕಾನೂರು, ನಾಗರಾಜ್, ಭಾರತಿ, ಸುಮಾರಾಣಿ, ಮಮತಾ, ಡಾ.ಶ್ರೀಧರ್, ಡಾ.ಸಂಗೀತ, ಡಾ.ಶೈಲಶ್ರೀ, ಕಾಂತರಾಜ್, ಸಂತೋಷ್, ಬಸವರಾಜ್ ಮುಂತಾದವರು ಭಾಗವಹಿಸಿದ್ದರು.
Youth Hostels Association ಬದಲಾದ ಹವಾಗುಣಕ್ಕನುಗುಣವಾಗಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು-ನಾಗೇಶ್
Date:
