Karnataka State Govt Employees Association ಕರ್ನಾಟಕ ರಾಜ್ಯ ಸರ್ಕಾರದಲ್ಲಿ HRMS- ತಂತ್ರಾಂಶ-2.0 ಎಂಬ ನೂತನ ವ್ಯವಸ್ಥೆ ಇತ್ತೀಚಿಗೆ ಪರಿಚಯವಾಗಿದ್ದು, ಈ ತಂತ್ರಾಂಶದ ನಿರ್ವಹಣೆ ಮತ್ತು ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (KASS) ನೊಂದಣಿ ಕಾರ್ಯವನ್ನು ಸುಗಮವಾಗಿ ನಿರ್ವಹಣೆ ಮಾಡಲು ಸಹಕಾರಿಯಾಗುವಂತೆ ಸರ್ಕಾರಿ ನೌಕರರಲ್ಲಿ ಅರಿವು ಮೂಡಿಸಲು ದಿನಾಂಕ:24-06-2025 ಮಂಗಳವಾರದಂದು ಶಿವಮೊಗ್ಗ ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಬೆಳಗ್ಗೆ 10.00 ರಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಆರ್ಥಿಕ ಇಲಾಖೆಯ HRMS ತಂತ್ರಾಂಶ-02 ನಿರ್ದೇಶನಾಲಯದಿಂದ ವಿಷಯ ತಜ್ಞರು ಹಾಗೂ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಶ್ರೀಮತಿ ನಿರ್ಮಲಾ ಯೋಜನಾಧಿಕಾರಿಗಳು ಇವರು ಹೆಚ್.ಆರ್.ಎಂ.ಎಸ್.ತಂತ್ರಾಂಶ ಮತ್ತು ಇ.ಎಸ್.ಆರ್.ಕುರಿತು ಪರಿಚಯಾತ್ಮಕ ತರಬೇತಿ ನೀಡುವರು. ಸುಮಂತ್ ತಾಂತ್ರಿಕ ತರಭೇತುದಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಹೆಚ್.ಆರ್.ಎಂ.ಎಸ್.-02ಕುರಿತು ಹಾಗೂ ಶ್ರೀಮತಿ ಸುಧಾಮಣಿ ಯೋಜನಾಧಿಕಾರಿಗಳು ಇವರು ಕೆ.ಎ.ಎಸ್.ಎಸ್.ನೋಂದಣಿ ಕುರಿತು ತರಬೇತಿ ನೀಡುವರು.
Karnataka State Govt Employees Association ಈ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇವರು ಉದ್ಘಾಟಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಉಪಸ್ಥಿತರಿರುವರು.
ನೌಕರರಿಗೆ ಅತ್ಯುಪಯುಕ್ತವಾಗಿರುವ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸುವ ಅಧಿಕಾರಿ ಹಾಗೂ ನೌಕರರಿಗೆ ಓಓಡಿ ಸೌಲಭ್ಯವನ್ನು ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
