Actor Kamal Haasan ಕನ್ನಡದ ಭಾಷಾ ಚರಿತ್ರೆ ತಿಳಿಯದೆ ದಡ್ಡ ಹೇಳಿಕೆ ನೀಡಿದ ಚಿತ್ರನಟ ಕಮಲ್ ಹಾಸನ್ ಕರ್ನಾಟಕದಲ್ಲಿ
” ಥಗ್ ಲೈಫ್ ” ಚಿತ್ರ ಬಿಡುಗಡೆಗೆ ಹೆಣಗಾಟ ನಡೆಸಿದ್ದಾರೆ.
ರಾಜ್ಯದ ನ್ಯಾಯಾಲಯದಲ್ಲಿ
ಸೌಜನ್ಯಕ್ಕಾದರೂ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನ್ಯಾಯಾಧೀಶರು ಕಮಲ್ ಹಾಸನ್ ಗೆ ಸೂಚಿಸಿದ್ದರು. ಕ್ಷಮೆ ಕೇಳಿದ ನಂತರ ಬಿಡುಗಡೆ ಎಂಬ ಅರ್ಥ ಬರುವಂತೆ ಕೋರ್ಟ್ ಸಲಹೆನೀಡಿತ್ತು.
ಆದರೆ ಕಮಲ್ ಹಾಸನ್ ಹಠವಾದಿಯಂತೆ
ಕ್ಷಮೆ ಕೇಳಲಾರೆ. ತನ್ನ ಹೇಳಿಕೆ ಸರಿ ಇದೆ ಎಂದು ಚಂಡಿ ಹಿಡಿದಿದ್ದರು.
ಅದೂ ಸಾಲದೆ ರಾಜ್ಯದ ಕೋರ್ಟ್ ತೀರ್ಪಿನ ವಿರುದ್ಧ. ಸುಪ್ರೀಂ ನಲ್ಲಿ ಮನವಿ ಸಲ್ಲಿಸಿದ್ದರು.
ಈಗ “ಸುಪ್ರೀಂ ” ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡುವ ತೀರ್ಪು ನೀಡಿದೆ.
ಕಮಲ್ ಹಾಸನ್ ಅಭಿಪ್ರಾಯಕ್ಕಿಂತ ಸಿನಿಮಾ ನೋಡಬೇಕೆ ,ಬೇಡವೆ? ಎಂಬ ಬಗ್ಗೆ ಸಾರ್ವಜನಿಕರೇ ತೀರ್ಮಾನಿಸುತ್ತಾರೆ.
ಇದಕ್ಕೆ ಅಡೆತಡೆ ತರಬಾರದು ಎಂದು
ಸುಪ್ರೀಂ ಅಭಿಪ್ರಾಯ ನೀಡಿದೆ.
Actor Kamal Haasan ಈಗ ಎದ್ದಿರುವ ಪ್ರಶ್ನೆಯೆಂದರೆ ಕನ್ನಡಾಭಿಮಾನಿಗಳು
ಹೇಗೆ ಪ್ರತಿಕ್ರಿಯಿಸುತ್ತಾರೆ? .
ಕನ್ನಡ ಪರ ಸಂಘಟನೆಗಳಿಗೀಗ
ಯಾವರೀತಿ ಪ್ರತಿರೋಧ ಅಥವಾ
ಕನ್ನಡ ವಿರೋಧಿ ಹೇಳಿಕೆಗೆ ಸ್ಪಂದಿಸುತ್ತಾರೆ? ಕಾದು ನೋಡಬೇಕಿದೆ.
ಮುಖ್ಯವಾಗಿ ರಾಜ್ಯ ಸರ್ಕಾರ ಮತ್ತು
ಚಲನಚಿತ್ರ ವಾಣಿಜ್ಯ ಮಂಡಳಿಯ ಕ್ರಮವೂ ಇಲ್ಲಿ ಪ್ರಧಾನ ಪಾತ್ರವಹಿಸಲಿದೆ ಎಂಬುದು ವಿಶ್ಲೇಷಕರ ಅನಿಸಿಕೆಯಾಗಿದೆ.
ಈಬಗ್ಗೆ ರಾಜ್ತದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಕೋರ್ಟ್ ಏನು ಆದೇಶ ನೀಡಿದೆಯೋ ಅದನ್ನು ನಾವು ಗೌರವದಿಂದ ಪಾಲನೆ ಮಾಡಬೇಕಿದೆ ಎಂದಿದ್ದಾರೆ.
