Dhiksoochi adventure ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್ ವತಿಯಿಂದ ಜೂನ್ 22ರಂದು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಕುರಿಂಜಲ್ ಟ್ರೆಕ್ ಪ್ರದೇಶಕ್ಕೆ ಚಾರಣ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಿಂದ ಜೂನ್ 22ರಂದು ಬೆಳಗ್ಗೆ 4ಕ್ಕೆ ಚಾರಣ ಪ್ರವಾಸ ಆರಂಭಗೊಳ್ಳಲಿದ್ದು, ಬೆಳಗ್ಗೆ 7ಕ್ಕೆ ಸ್ಥಳ ತಲುಪಿದ ನಂತರ ಬೆಳಗಿನ ಉಪಾಹಾರ ವ್ಯವಸ್ಥೆ ಇರಲಿದೆ. ನಂತರ ಫಾರೆಸ್ಟ್ ಚೆಕ್‌ಪೋಸ್ಟ್ ನಿಂದ 12 ಕೀಮಿ ಚಾರಣ ಆರಂಭಗೊಳ್ಳಲಿದೆ. ಕುರಿಂಜಲ್ ಪೀಕ್ ತಲುಪಿ ಕೆಲ ಸಮಯದ ಬಳಿಕ ಮತ್ತೆ ಚೆಕ್ ಪೋಸ್ಟ್ ಸ್ಥಳಕ್ಕೆ ಹಿಂದಿರುಗುವುದು. ಸಂಜೆ 6 ಗಂಟೆ ನಂತರ ಚಾರಣ ಸ್ಥಳದಿಂದ ರಾತ್ರಿ ವೇಳೆಗೆ ಶಿವಮೊಗ್ಗಕ್ಕೆ ಹಿಂದಿರುಗಲಾಗುವುದು.
Dhiksoochi adventure ಚಾರಣದಲ್ಲಿ ಉಪಾಹಾರ, ಊಟ, ಬಸ್ ಸೌಲಭ್ಯ, ಅರಣ್ಯ ಪ್ರವೇಶದ ಅನುಮತಿ ವ್ಯವಸ್ಥೆ ಮಾಡಲಾಗುತ್ತದೆ. ಗೈಡ್ ಕೂಡ ಇರಲಿದ್ದಾರೆ. ಚಾರಣದಲ್ಲಿ ಭಾಗಿಯಾಗಲು ಆಸಕ್ತ ಇರುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8277314779 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
