karnataka Sanga Shivamogga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಜೂನ್ 2025ರ ಭಾನುವಾರ, ‘2025ರ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ’ ವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5:30 ಘಂಟೆಗೆ ನಾಡಿನ ಖ್ಯಾತ ಮಾನಸಿಕ ಆರೋಗ್ಯ ತಜ್ಞರು, ವಿಜ್ಞಾನಿ, ಸಾಹಿತಿಗಳಾದ ಬೆಂಗಳೂರಿನ ಡಾ. ಸಿ.ಆರ್. ಚಂದ್ರಶೇಖರ್ ಅವರಿಗೆ ‘ಡಾ. ಕೆ. ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ಯನ್ನು ಮತ್ತು ಪ್ರಸಿದ್ಧ ಸಾಹಿತಿ, ಸಂಶೋಧಕರಾದ ಮೈಸೂರಿನ ಡಾ. ಟಿ.ಎನ್. ನಾಗರತ್ನ ಅವರಿಗೆ ‘ಡಾ. ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಡಾ. ಸಿ.ಆರ್. ಚಂದ್ರಶೇಖರ್ ಅವರು ಕುರಿತು ಡಾ. ಕೆ.ಎಸ್. ಪವಿತ್ರ, ವೈದ್ಯೆ, ಸಾಹಿತಿ, ಶಿವಮೊಗ್ಗ ಮತ್ತು ಡಾ. ಟಿ.ಎನ್. ನಾಗರತ್ನ ಅವರ ಕುರಿತು ಪ್ರೊ. ಎನ್.ಎಂ. ತಳವಾರ್, ಲೇಖಕರು, ಸಂಶೋಧಕರು ಮೈಸೂರು ಇವರುಗಳು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಪ್ರಶಸ್ತಿಯು 25,000/- ರೂ. (ಇಪ್ಪತ್ತೈದು ಸಾವಿರ) ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿ ಅವರು ವಹಿಸಲಿದ್ದಾರೆ.
karnataka Sanga Shivamogga ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ
