Sri Adichunchanagiri Mahasansthan Math ರಾಜ್ಯದ ಆರ್ಥಿಕತೆಯ ಮೂಲಾಧಾರಗಳಲ್ಲಿ ಒಂದಾಗಿರುವ ಹೋಟೆಲ್ ಉದ್ಯಮದ ಪ್ರಾತಿನಿಧಿಕ ಸಂಸ್ಥೆ ರಾಜ್ಯ ಹೋಟೆಲುಗಳ ಸಂಘದ ೭೦ನೇ ವಾರ್ಷಿಕೋತ್ಸವವ ಗುರುವಾರ ಮೇ ೨೯ರಂದು ಬೆಳಗ್ಗೆ ೧೦ಗಂಟೆಗೆ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಶತಮಾನೋತ್ಸವ ಭವನದ ಸರ್‌ಎಂವಿ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಹೋಟೆಲ್ ಉದ್ಯಮ ಎದುರಿಸುತ್ತಿರುವ ಸವಾಲುಗಳು ಅದರಲ್ಲೂ ಮುಖ್ಯವಾಗಿ ಹಾಲು, ಹಾಲಿನ ಉತ್ಪನ್ನಗಳು ಹಾಗು ಇತರ ವಸ್ತುಗಳ ಬೆಲೆ ಏರಿಕೆ, ತೆರಿಗೆ ಬರೆ ಬಗ್ಗೆ ಚರ್ಚೆ ನಡೆಯಲಿದೆ. ಇದರ ಜೊತೆಗೆ ಹೋಟೆಲ್ ಉದ್ಯಮದಲ್ಲಿನ ಇತ್ತೀಚಿನ ಟ್ರೆಂಡ್ ಗಳು, ಸವಾಲುಗಳು-ಅವಕಾಶಗಳ ಬಗ್ಗೆ ಈ ಸಮಾರಂಭದಲ್ಲಿ ಧ್ವನಿ ಎತ್ತಲಾಗುವುದು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ (ಡಾ.) ನಿರ್ಮಲಾನಂದನಾಥ ಸ್ವಾಮೀಜಿ ಅವರ ಪೂಜನೀಯ ಉಪಸ್ಥಿತಿಯಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಶ್ರೀ ಅಶ್ವಥ್ ನಾರಾಯಣ್ ಸಮಾರಂಭದ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಶ್ರೀ ಜಿ ಕೆ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ, ಎಫ್‌ಎಚ್‌ಆರ್‌ಎಐ ಅಧ್ಯಕ್ಷ ಶ್ರೀ ಕೆ ಶ್ಯಾಮರಾಜು, ಕೆ ಎಸ್ ಎಚ್ ಎ ಗೌರವ ಅಧ್ಯಕ್ಷ ಶ್ರೀ ಬಿ ಚಂದ್ರಶೇಖರ ಹೆಬ್ಬಾರ್, ಕೆಎಸ್‌ಎಚ್‌ಎ ಮಾಜಿ ಅಧ್ಯಕ್ಷ ಶ್ರೀ ಸಿ ವಿ ಮಹದೇವಯ್ಯ, ನಂದನ ಪ್ಯಾಲೇಸ್ ಗ್ರೂಪ್ ಸಿಎಂಡಿ ಡಾ. ಆರ್ ರವಿಚಂದರ್, ಕರ್ನಾಟಕ ಸರಕಾರದ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಈ ಸಮಾರಂಭದಲ್ಲಿ ಸಾಧಕ ಹೋಟೆಲ್ ಉದ್ಯಮಿಗಳನ್ನು ಆತಿಥ್ಯ ರತ್ನ ಹಾಗು ಉದ್ಯಮ ರತ್ನ ಪ್ರಶಸ್ತಿ ಮೂಲಕ ಗೌರವಿಸಲಾಗುವುದು.
Sri Adichunchanagiri Mahasansthan Math ಇದರ ಜೊತೆಗೆ, ಹೋಟೆಲ್ ಉದ್ಯಮ ಎದುರಿಸುತ್ತಿರುವ ಸವಾಲುಗಳು, ಬೆಲೆ ಹಾಗು ತೆರಿಗೆ ಏರಿಕೆ ಬಿಸಿ, ನುರಿತ ಕಾರ್ಮಿಕರ ಕೊರತೆ, ಹೀಗೆ ನಾನಾ ವಿಷಯಗಳ ಬಗ್ಗೆ ತಜ್ಞರು, ಹಿರಿಯ ಹೋಟೆಲ್ ಉದ್ಯಮಿಗಳು ತಮ್ಮ ಅನುಭವ ಹಂಚಿಕೊAಡು, ಇವುಗಳಿಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಈ ಸಮಾರಂಭದಲ್ಲಿ ಬೆಳಕು ಚೆಲ್ಲಲಾಗುವುದು. ರಾಜ್ಯ-ಹೊರ ರಾಜ್ಯಗಳ ಹಿರಿಯ ಹೋಟೆಲ್ ಉದ್ಯಮಿಗಳು, ನೀತಿ ನಿರೂಪಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
