Shivamogga Sahyadri College of Commerce and Management ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯುತ್ತಿರುವ ಭರತನಾಟ್ಯ ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಪ್ರಾಯೋಗಿಕ ಪರೀಕ್ಷೆಯ ಕೇಂದ್ರಕ್ಕೆ ಭೇಟಿ ನೀಡಿದ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ಬೆಟಕೋಟೆ ಇವರು ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ನಮ್ಮ ಮಕ್ಕಳು ಎಂಬ ಭಾವನೆ ಪರೀಕ್ಷಕರಿಗೆ ಇದ್ದರೆ ಯಾವ ಗೊಂದಲಗಳಿಗೂ ಅವಕಾಶ ಇರದೆ ಪರೀಕ್ಷೆಗಳು ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಡಾ ಮಂಜುನಾಥ್, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಅವಿನಾಶ್, ಡಾ. ಪ್ರಕಾಶ್ ಮರ್ಗನಹಳ್ಳಿ, ಪರೀಕ್ಷಾ ಸಂಯೋಜಕ ಡಾ. ಗಣೇಶ್ ಆರ್ ಕೆಂಚನಾಲ್. ವಿಶ್ವವಿದ್ಯಾಲಯದಿಂದ ಆಗಮಿಸಿದ ಡಾ. ಭುವನೇಶ್ವರಿ ಸೇರಿದಂತೆ ಡಾ ಕೇಶವಕುಮಾರ್ ಪಿಳೈ, ಡಾ.ಶುಭ್ರತಾ ಹಾಗೂ ರಾಜ್ಯದ ನಾನಾ ಭಾಗಗಳಿಂದ ಪರೀಕ್ಷಕರು ಆಗಮಿಸಿದ್ದರು.
Shivamogga Sahyadri College of Commerce and Management ಹಾಗೂ ಇದೇ ಕಾಲೇಜಿನಲ್ಲಿ ಮೇ 17 ಮತ್ತು 18 ರಂದು ರಾಜ್ಯ ಮಟ್ಟದ ನೃತ್ಯ, ಸಂಗೀತ, ತಾಳವಾದ್ಯ, ಜೂನಿಯರ್ ಹಾಗೂ ಸೀನಿಯರ್ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದವು
