Monday, February 2, 2026
Monday, February 2, 2026

Department of Collegiate Education ಪ್ರಥಮ ಪಿ.ಯು.ಸಿ. ದಾಖಲಾತಿಗೆ ಅರ್ಜಿ ಆಹ್ವಾನ; ಅವಧಿ ವಿಸ್ತರಣೆ

Date:

Department of Collegiate Education 2025-26 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜುಗಳಿಗೆ ಪ್ರಥಮ ಪಿ.ಯು.ಸಿ. ದಾಖಲಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 20ರವರೆಗೆ ವಿಸ್ತರಿಸಲಾಗಿದೆ.
2024-25 ನೇ ಸಾಲಿನಲ್ಲಿ ಉತ್ತೀರ್ಣರಾದ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಆಯಾ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ 02 ಭಾವಚಿತ್ರ, ಎಸ್.ಎಸ್.ಎಲ್.ಸಿ ಪ್ರಾವಿಷನಲ್ ಅಂಕಪಟ್ಟಿ, ಎಸ್‌ಎಟಿಎಸ್ ನಂಬರ್ ಆಧಾರ್ ಕಾರ್ಡ್ ನಕಲು ಪ್ರತಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಕಲು ಪ್ರತಿ, ಪೋಷಕರ ಮತ್ತು ಹಿಂದಿನ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ, ವಿಶೇಷ ಪ್ರಮಾಣ ಪತ್ರ (ಇದ್ದಲ್ಲಿ) ಇವುಗಳೊಂದಿಗೆ ಮೇ 20 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Department of Collegiate Education ಕಾಲೇಜುಗಳ ವಿವರ : ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಗಾಜನೂರು-56 ಶಿವಮೊಗ್ಗ ತಾಲ್ಲೂಕು ಮೊ.ಸಂ.9739977365 ಲಭ್ಯವಿರುವ ಕೋರ್ಸ್ಗಳು ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹೊಸೂರು-908- ಶಿಕಾರಿಪುರ ತಾಲ್ಲೂಕು ಮೊ. ಸಂ. 8971701958, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಅಟಲ್ ಬಿಹಾರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆವಿನಹಳ್ಳಿ-584 ಸಾಗರ ತಾಲ್ಲೂಕು ಮೊ.ಸಂ.9480767164/6363184683, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್ ಕೋರ್ಸ್ಗಳು ಲಭ್ಯವಿರುತ್ತವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...