Rotary Club Shivamogga ಮನುಕುಲದ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ನುಡಿದರು ಅವರು ನಗರದ ಹೊರವಲಯದಲ್ಲಿ ಇರುವ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಇರುವ ಕ್ಯಾನ್ಸರ್ ಪೀಡಿತ ಮಹಿಳೆ ಗಿರಿಜಮ್ಮನವರ ಮನೆ ಮಳೆಯಿಂದ ಹಾಳಾಗಿದ್ದು ಅದಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳು ಹಾಗೂ ಟಾರ್ಪಲ್ ಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಸೇವೆ ಮಾಡಿದಾಗ ಆ ಸೇವೆ ನಮಗೆ ಸಂತೃಪ್ತಿಯನ್ನು ಕೊಡುತ್ತದೆ ಗಿರಿಜನಮ್ಮನವರು ತುಂಬಾ ಸಂಕಷ್ಟದಲ್ಲಿ ಇದ್ದು ಇವರಿಗೆ ನೆರವು ನೀಡುವವರು ಕೈಜೋಡಿಸಬಹುದು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ ವಿಜಯಕುಮಾರ್ ಅವರು ಮಾತನಾಡುತ್ತ ಗಿರಿಜಮ್ಮನವರಿಗೆ ಕಾಯಿಲೆಯಿಂದ ಬಳಲುವಾಗ ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಸ್ಥೆಗಳ ವತಿಯಿಂದ ಆರ್ಥಿಕ ನೆರವನ್ನು ನೀಡಿ ಸಹಕರಿಸಿದ್ದೇವೆ ಈಗ ಆರೋಗ್ಯದಲ್ಲಿ ತುಂಬಾ ಗುಣಮಟ್ಟ ಕಂಡು ಬರುತ್ತಿದೆ ಇದೇ ರೀತಿ ಹಲವಾರು ಸಂಘ ಸಂಸ್ಥೆಯವರು ನೆರವು ನೀಡಿದ್ದನ್ನು ಸ್ಮರಿಸಿದರು.
Rotary Club Shivamogga ಇದೇ ಸಂದರ್ಭದಲ್ಲಿ ಫಲಾನುಭವಿಗಳಾದ ಗಿರಿಜಮ್ಮನವರು ಮಾತನಾಡುತ್ತಾ ನಮಗೆ ಇಂತಹ ಸಂಘ ಸಂಸ್ಥೆಯವರು ಸಹಕಾರ ನೀಡದೆ ಇದ್ದರೆ ನನ್ನ ಜೀವ ಯಾವಾಗೋ ಹೋಗಬೇಕಾಗಿತ್ತು. ನಿಮಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಕಂಬನಿ ಮಿಡಿದರು.
ಕಾರ್ಯಕ್ರಮದಲ್ಲಿ ಇನ್ನರ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಅವರು ಮಾತನಾಡುತ್ತಾ ನಮ್ಮ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೊಲಿಗೆ ಯಂತ್ರ ಮತ್ತು ಅಂಗವಿಕಲರಿಗೆ ಸಾಧನಗಳನ್ನು ನೀಡುವುದರ ಮುಖಾಂತರ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅನಾಥಾಶ್ರಮಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ನಮ್ಮ ಸಂಸ್ಥೆ ಮಾನವೀಯತೆಯನ್ನು ಮೆರೆದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು
